ಸನ್ನಿ ಲಿಯೋನ್ 
ಬಾಲಿವುಡ್

ಸನ್ನಿ ಜೀವನಚರಿತ್ರೆಗೆ ಅವಳೇ ನಾಯಕಿ, ತೆರೆ ಮೇಲೆ ಬರಲಿದೆ ನೀಲಿ ತಾರೆಯ ಪ್ರೇಮಕಥೆ, ವೃತ್ತಿ ಜೀವನ

ಇತ್ತೀಚಿಗೆ ರಾಷ್ಟ್ರ ಗೀತೆಯನ್ನು ತಪ್ಪಾಗಿ ಉಚ್ಚರಿಸಿ ಸುದ್ದಿಯಾಗಿದ್ದ ಮಾಜಿ ನೀಲಿ ತಾರೆ, ಬಾಲಿವುಡ್​ಮಾದಕ ನಟಿ ಸನ್ನಿ ಲಿಯೋನ್ ಅವರು ಈಗ...

ಮುಂಬೈ: ಇತ್ತೀಚಿಗೆ ರಾಷ್ಟ್ರ ಗೀತೆಯನ್ನು ತಪ್ಪಾಗಿ ಉಚ್ಚರಿಸಿ ಸುದ್ದಿಯಾಗಿದ್ದ ಮಾಜಿ ನೀಲಿ ತಾರೆ, ಬಾಲಿವುಡ್​ ಮಾದಕ ನಟಿ ಸನ್ನಿ ಲಿಯೋನ್ ಅವರು ಈಗ ಒಂದು ಸಕಾರಾತ್ಮಕ ವಿಚಾರಕ್ಕಾಗಿ ಸುದ್ದಿಯಾಗಿದ್ದಾರೆ.
ಅಡಲ್ಟ್ ಸಿನಿಮಾಗಳ ನಟಿ ಎನ್ನುವ ಬ್ರ್ಯಾಂಡ್ ಇಮೇಜ್‌ ಬದಲಿಸಿಕೊಳ್ಳಲು ಯತ್ನಿಸುತ್ತಿರುವ ಸನ್ನಿ ಲಿಯೋನ್ ಅವರ ಪ್ರೇಮಕಥೆ ಹಾಗೂ ವೃತ್ತಿ ಜೀವನ ಇದೀಗ ತೆರೆಯ ಮೇಲೆ ತರಲಾಗುತ್ತಿದ್ದು, ಅವರ ಜೀವನಚರಿತ್ರೆ ಶೀಘ್ರದಲ್ಲಿಯೇ ಸೆಟ್ಟೆರಲಿದೆ. ಈ ಚಿತ್ರವನ್ನು ಅಲಿ ಜಾಫರ್ ನಿರ್ದೇಶಿಸಲಿದ್ದಾರೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ.
ಬಾಲಿವುಡ್​ನಲ್ಲಿ ಈಗಾಗಲೇ ಹಲವು ಜೀವನಾಧಾರಿತ ಚಿತ್ರಗಳು ತೆರೆಕಂಡು, ಸೂಪರ್ ಹಿಟ್ ಆಗಿವೆ. ಆದರೆ ಈ ಹಿಂದಿನ ಚಿತ್ರಗಳು ಕ್ರೀಡೆ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಕಥಾವಸ್ತುವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಇದೀಗ ಸನ್ನಿ ಲಿಯೋನ್ ಅವರ ಜೀವನಾಧಾರಿತ ಚಿತ್ರ ನಿರ್ಮಿಸುತ್ತಿರುವುದು ಹಲವರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಮತ್ತೊಂದು ವಿಶೇಷ ಎಂದರೇ ಈ ಚಿತ್ರದಲ್ಲಿ ಸ್ವತಃ ಸನ್ನಿ ಅಭಿನಯಿಸಲಿದ್ದಾರೆ. ಸನ್ನಿ ಪತಿ ಡೇನಿಯಲ್ ವೆಬರ್ ಕೂಡ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಬಾಲಿವುಡ್​ಗೆ ಕಾಲಿಟ್ಟ ಕೆಲವೇ ವರ್ಷದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ಈ ನಟಿ 2011ರಲ್ಲಿ ಬಿಗ್ ಬಾಸ್ ಮೂಲಕ ಬಾಲಿವುಡ್​ಗೆ ಪರಿಚಿತರಾಗಿದ್ದರು. ಗೂಗಲ್​ನಲ್ಲಿ ಅತೀ ಹೆಚ್ಚು ಬಾರಿ ವೀಕ್ಷಿಸಿದ ಸೆಲೆಬ್ರಿಟಿ ಎಂಬ ಕೀರ್ತಿಗೂ ಸನ್ನಿ ಪಾತ್ರರಾಗಿದ್ದಾರೆ.
ರಾಗಿಣಿ ಎಂಎಂಎಸ್, ಮಸ್ತಿಜಾದೇ,ಜಾಕ್ ಪಾಟ್, ಏಕ್ ಪಹೇಲಿ ಲೀಲಾ ಚಿತ್ರಗಳಲ್ಲಿ ಅಭಿನಯಿಸಿರುವ ಸನ್ನಿ ಲಿಯೋನ್ ಇತ್ತೀಚೆಗೆ ಶಾರೂಖ್ ಖಾನ್ ಅಭಿನಯದ ರಾಯೀಸ್ ಚಿತ್ರದ ಐಟಂ ಸಾಂಗ್ ವೊಂದಕ್ಕೆ ಹೆಜ್ಜೆ ಹಾಕಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel