ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ 
ಬಾಲಿವುಡ್

ನಾನು ಮಹಿಳೆಯಾಗಿರಬೇಕಿತ್ತು; ಮಹಿಳಾ ದಿನಾಚರಣೆಯಂದು ಎಸ್ ಆರ್ ಕೆ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರು ತಾನು ಹೆಣ್ಣಾಗಿ ಹುಟ್ಟಬೇಕಿತ್ತು ಎಂದಿದ್ದಾರೆ "ನಾನು ಮಹಿಳೆಯಾಗಿರಬೇಕಿತ್ತು

ಮುಂಬೈ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರು ತಾನು ಹೆಣ್ಣಾಗಿ ಹುಟ್ಟಬೇಕಿತ್ತು ಎಂದಿದ್ದಾರೆ "ನಾನು ಮಹಿಳೆಯಾಗಿರಬೇಕಿತ್ತು ಎಂದು ಆಗಾಗ್ಗೆ ಅಂದುಕೊಳ್ಳುತ್ತೇನೆ.. ನಂತರ ನನಗೆ ತಿಳಿಯುತ್ತದೆ ಅದಕ್ಕಾಗಿ ಬೇಕಾಗುವ ಧೈರ್ಯ, ಕೌಶಲ್ಯ, ತ್ಯಾಗದ ಭಾವನೆ, ನೈಜ ಪ್ರೇಮ ಮತ್ತು ಸೌಂದರ್ಯ ನನ್ನಲ್ಲಿಲ್ಲವೆಂದು. ಹುಡುಗಿಯರೇ ಧನ್ಯವಾದಗಳು" ಎಂದು ಶಾರುಕ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.

ಇದೇ ವಿಷಯದ ಬಗ್ಗೆ ೫೦ ವರ್ಷದ ನಟ ಸಾಮಾಜಿಕ ಜಾಲತಾಣದ ವಿಡಿಯೋ ಒಂದರಲ್ಲಿ ಮಾತನಾಡಿದ್ದು, ತಮ್ಮ ಇಷ್ಟವಾದ ಸಿನೆಮಾಗಳು, ತಮಗೆ ಇಷ್ಟವಾದ ಊಟ, ಪುಸ್ತಕಗಳು ಮತ್ತು ಅಭಿಮಾನಿಗಳ ಬಗ್ಗೆ ತೆರೆದುಕೊಂಡಿದ್ದಾರೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಅವರು ವಿಶೇಷ ಸಂದೇಶ ನೀಡಿದ್ದು, "ನಾನು ವಿಶ್ವದ ಎಲ್ಲ ಮಹಿಳೆಯರ ಅತಿ ದೊಡ್ಡ ಅಭಿಮಾನಿ. ನಿಮ್ಮೆಲ್ಲರನ್ನೂ ಸಮನಾಗಿ ಪ್ರೀತಿಸುತ್ತೇನೆ. ಅವರಿಗೆ ಬೇಕಾದ ಆಯ್ಕೆ ಮಾಡಿಕೊಳ್ಳಲು ಅವರಿಗೆ ಇನ್ನೂ ಹೆಚ್ಚಿನ ಶಕ್ತಿ, ಇನ್ನೂ ಹೆಚ್ಚಿನ ಅಧಿಕಾರ ಮತ್ತು ಇನ್ನೂ ಹೆಚ್ಚನ ಸ್ವಾತಂತ್ರ್ಯ ಸಿಗಬೇಕು. ಮಹಿಳಾ ದಿನಾಚರಣೆಯಂದು ಎಲ್ಲ ಮಹಿಳೆಯರಿಗೂ ಧನ್ಯವಾದಗಳು" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT