ನಟಿ ಪೂನಂ ಪಾಂಡೆ 
ಬಾಲಿವುಡ್

ಬಾಲಿವುಡ್ ನಲ್ಲಿ ಗಮನ ಸೆಳೆಯಲು ವಿವಾದಗಳನ್ನು ಸೃಷ್ಟಿಸಬೇಕಾಯ್ತು: ಪೂನಂ ಪಾಂಡೆ

"ಖಾನ್ ಗಳು ಮತ್ತು ಕಪೂರ್ ಗಳ" ನಡುವೆ ಹೊಸ ನಟಿಯರನ್ನು ಉಪೇಕ್ಷಿಸುವುದರಿಂದ, ಬಾಲಿವುಡ್ ನಲ್ಲಿ ಗಮನ ಸೆಳೆಯುವ ನನ್ನ ಬಯಕೆಯಿಂದ ಈ ಷೋವೃತ್ತಿಯಲ್ಲಿ ವಿವಾದಾತ್ಮಕ ರಾಣಿಯಾಗಿ

ಮುಂಬೈ: "ಖಾನ್ ಗಳು ಮತ್ತು ಕಪೂರ್ ಗಳ" ನಡುವೆ ಹೊಸ ನಟಿಯರನ್ನು ಉಪೇಕ್ಷಿಸುವುದರಿಂದ, ಬಾಲಿವುಡ್ ನಲ್ಲಿ ಗಮನ ಸೆಳೆಯುವ ನನ್ನ ಬಯಕೆಯಿಂದ ಈ ಷೋವೃತ್ತಿಯಲ್ಲಿ ವಿವಾದಾತ್ಮಕ ರಾಣಿಯಾಗಿ ಕಾಣಿಸಿಕೊಳ್ಳಬೇಕಿತ್ತು ಎಂದು ನಟಿ ಪೂನಂ ಪಾಂಡೆ ಹೇಳಿದ್ದಾರೆ. 
2011 ರಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದರೆ ನಗ್ನಳಾಗುವುದಾಗಿ ಘೋಷಿಸದ್ದ ನಟಿ ಭಾರಿ ಪ್ರಚಾರ ಗಿಟ್ಟಿಸಿದ್ದರು. 
ಇಂತಹ ಘೋಷಣೆ ಮಾಡುವ ಹೊಳಹು ಹೇಗೆ ಬಂತು ಎಂದು ವಿವರಿಸುವ ನಟಿ "ನಾನು ನನ್ನ ಪತ್ರಿಕೋದ್ಯಮ ಗೆಳೆಯರೊಂದಿಗೆ ಕೂತು ಚರ್ಚಿಸುವಾಗ ದೊಡ್ಡ ವಿಷಯವೊಂದು ಚರ್ಚೆಗೆ ಬಂತು. ನಾನು 25-30 ಕ್ಯಾಲೆಂಡರ್ ಫೋಟೋ ಶೂಟ್ ಗಳನ್ನೂ ಮಾಡಿದ್ದರೂ ನನಗೆ ಅಂತಹ ದೊಡ್ಡ ಮಟ್ಟದ ಮನ್ನಣೆ ಸಿಕ್ಕಿರಲಿಲ್ಲ. 
"ಆಗ ನಾನು ಗಮನಿಸಿದ್ದೇನೆಂದರೆ ಎಷ್ಟೋ ಜನ ಹೊಸ ನಟಿಯರು, ಖಾನ್ ಗಳು ಮತ್ತು ಕಪೂರ್ ಗಳ ಜೊತೆಗೆ ಕೆಲಸ ಮಾಡಿದರು ಅವರು ಗಮನ ಸೆಳೆಯಲು ವಿಫಲವಾಗುತ್ತಾರೆ. ಜನಕ್ಕೆ ಗೊತ್ತಿರುವುದು ಖಾನ್ ಗಳು ಮತ್ತು ಕಪೂರ್ ಗಳು ಮಾತ್ರ. 
"ಇಂತಹ ಪರಿಸ್ಥಿತಿಯಲ್ಲಿ ನಿಮಗೆ ವಿಭಿನ್ನವಾಗ ಗುರುತು ಸಿಗುವುದು ಕಷ್ಟ. ಅದರಲ್ಲೂ ನಿಮ್ಮ ಹಿನ್ನಲೆಯಲ್ಲಿ ದೊಡ್ಡ ಮನುಷ್ಯರು ಯಾರು ಇಲ್ಲದೆ ಹೋದಾಗಲಂತೂ ಇದು ಹೆಚ್ಚು ಕಷ್ಟ. ಇದಕ್ಕೆ ನನ್ನದೇ ವಿಭಿನ್ನ ಗುರುತು ಸೃಷ್ಟಿಸಿಕೊಂಡು ಮನ್ನಣೆ ದೊರಕಿಸಿಕೊಳ್ಳಲು ನಿಶ್ಚಯಿಸಿದೆ. ಅದಕ್ಕೆ ವಿವಾದ ಮಾತ್ರ ಇದಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿದೆ" ಎಂದು ನೆನಪಿಸಿಕೊಳ್ಳುತ್ತಾರೆ ನಶಾ ಸಿನೆಮಾದ ನಟಿ. 
ಸಾಮಾಜಿಕ ಜಾಲತಾಣಗಳಲ್ಲಿ ದಿಟ್ಟತನದ ಫೋಟೋಗಳನ್ನು ಹಾಕುವುದಕ್ಕೆ ನಟಿ ಪೂನಂ ಪ್ರಖ್ಯಾತ. ನನಗೆ ಯಾವುದೇ ನಿರ್ಧಿಷ್ಟ ಕನಸಿನ ಪಾತ್ರದ ಕಲ್ಪನೆ ಇಲ್ಲ ಎಂದು ಹೇಳುವ ನಟಿ "ಪೂರ್ತಿ ಸೀರೆ ಉಟ್ಟು ನಟಿಸುವಾಸೆ" ಎನ್ನುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ