ಮತ್ತೆ ಹುತಾತ್ಮ ಯೋಧರ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ ಅಕ್ಷಯ್ ಕುಮಾರ್
ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲಿನ ದಾಳಿಯಲ್ಲಿ ಹುತಾತ್ಮರಾಗಿದ್ದ ಹುತಾತ್ಮರಿಗೆ ನೆರವಿನ ಹಸ್ತ ಚಾಚಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್...
ಮುಂಬೈ: ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲಿನ ದಾಳಿಯಲ್ಲಿ ಹುತಾತ್ಮರಾಗಿದ್ದ ಹುತಾತ್ಮರಿಗೆ ನೆರವಿನ ಹಸ್ತ ಚಾಚಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೆ ಆ ಕಾರ್ಯವನ್ನು ಮುಂದುವರೆಸಿದ್ದಾರೆ.
ಗಡಿ ಭದ್ರತಾ ಪಡೆ ಯೋಧರಿಗೆ ನೈತಿಕ ಬೆಂಬಲ ನೀಡುವುದಕ್ಕಾಗಿ ಇತ್ತೀಚೆಗಷ್ಟೇ ಗಡಿಭದ್ರತಾಪಡೆಗಳ ಶಿಬಿರಕ್ಕೆ ಭೇಟಿ ನೀಡಿ ಅವರ ಜತೆ ಕೆಲ ಸಮಯ ಕಳೆದು ಬಂದಿದ್ದರು. ಅಸ್ಸಾಂನ ದಿಗ್ ಬೋಯ್ ನಲ್ಲಿ ಕಳೆದ ವಾರ ಉಲ್ಫಾ ಉಗ್ರರ ಜತೆಗಿನ ಹೋರಾಟದಲ್ಲಿ ಹುತಾತ್ಮರಾಗಿದ್ದ ಯೋಧ ಎನ್ ಕೆ ನರಪತ್ ಸಿಂಗ್ ಅವರ ಪತ್ನಿ ಮತ್ತು ಮೂವರು ಪುತ್ರಿಯರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಸೇನೆಯಲ್ಲಿರುವ ಸ್ನೇಹಿತನಿಂದ ನರಪತ್ ಸಿಂಗ್ ಕುಟಂಬದ ವಿಚಾರ ತಿಳಿದ ಅಕ್ಷಯ್ ಕುಮಾರ್ ನರಪತ್ ಕುಟುಂಬದ ಜತೆ ಮಾತನಾಡಿ ಸಾಂತ್ವನ ಹೇಳಿದರು. ಅಲ್ಲದೆ ಹುತಾತ್ಮ ಯೋಧನ ಪತ್ನಿಯ ಖಾತೆಗೆ 9 ಲಕ್ಷ ರುಪಾಯಿಯನ್ನು ವರ್ಗಾಯಿಸಿದ್ದಾರೆ.