ನವದೆಹಲಿ: ತಾನು ಸಿನಿಮಾದಲ್ಲಿ ನಟಿಸಲು ಆರಂಭಿಸಿದ ದಿನಗಳಲ್ಲಿ ಚರ್ಮದ ರಕ್ಷಣೆ ಬಗ್ಗೆ ಅಷ್ಟೊಂದು ಕಾಳಜಿ ವಹಿಸಿರಲಿಲ್ಲ. ಆದರೆ ಕೆಲ ಸಮಯಗಳು ಕಳೆದ ನಂತರ ಚರ್ಮವನ್ನು ರಕ್ಷಿಸಿಕೊಳ್ಳಬೇಕಾದ್ದರ ಮಹತ್ವ ತಿಳಿಯಿತು ಎನ್ನುತ್ತಾರೆ ನಟಿ ಕಾಜೊಲ್.
ಓಲೆ ಟೋಟಲ್ ಎಫೆಕ್ಟ್ಸ್ ಕಾಸ್ಮೆಟಿಕ್ಸ್ ಸಾಮಗ್ರಿಯ ರಾಯಭಾರಿಯಾಗಿ ಹೊಸ ಕಳೆಯೊಂದಿಗೆ ಕಾಣಿಸಿಕೊಳ್ಳುತ್ತಿರುವ ಕಾಜೊಲ್ ಕಳೆದ ಎರಡು ದಶಕಗಳಿಂದ ಬಾಲಿವುಡ್ ನಲ್ಲಿದ್ದಾರೆ. ಆರಂಭದ ದಿನಗಳಲ್ಲಿ ನಾನು ಸಾಕಷ್ಟು ಕೆಲಸ ಮಾಡುತ್ತಿದ್ದೆ. ಆದರೆ ಚರ್ಮದ ಬಗ್ಗೆ ಒಂಚೂರು ಕಾಳಜಿ ಇರಲಿಲ್ಲ.
''ನಾನು ನಟಿಯಾಗಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಸಮಯದಲ್ಲಿ ನನ್ನ ಚರ್ಮದ ಬಗ್ಗೆ ಅಷ್ಟೊಂದು ಕಾಳಜಿ ಹೊಂದಿರಲಿಲ್ಲ. ಆಗ ನನಗೆ ಚಿಕ್ಕ ವಯಸ್ಸು, ದುಡಿಯಬೇಕು ಅನ್ನುವುದು ಮಾತ್ರ ಗೊತ್ತಿತ್ತು. ನೀವು ದೊಡ್ಡವರಾಗುತ್ತಾ ಹೋದಂತೆ, ಜಗತ್ತು ಬದಲಾಗುತ್ತಿದೆ, ಅದಕ್ಕೆ ತಕ್ಕಂತೆ ನಾವು ಕೂಡ ಬದಲಾಗಬೇಕು ಅನ್ನುವುದು ನಿಮ್ಮ ಮನಸ್ಸಿಗೆ ಬರುತ್ತದೆ. ನಾನು ನನ್ನ ದಿನಚರಿಯಲ್ಲಿ ಚರ್ಮದ ರಕ್ಷಣೆಯನ್ನು ಅಳವಡಿಸಿಕೊಂಡಿದ್ದೇನೆ'' ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಇಮೇಲ್ ಸಂದರ್ಶನದಲ್ಲಿ ಹೇಳಿದ್ದಾರೆ.
ಹಾಗಾದರೆ ನಿಮ್ಮ ಚರ್ಮದ ಆರೈಕೆ ಕ್ರಮ ಹೇಗೆ ಎಂದು ಕೇಳಿದ್ದಕ್ಕೆ, ''ಮುಖವನ್ನು ತೊಳೆಯುವುದು, ಕ್ಲೀನಾಗಿ ಇಟ್ಟುಕೊಳ್ಳುವುದು, ಮಾಯಿಶ್ಚರೈಸ್, ಪ್ರತಿ ರಾತ್ರಿ ಮೇಕಪ್ ತೆಗೆದು ಮಲಗುವುದು, ಪ್ರತಿದಿನ ಕನಿಷ್ಟ 8 ಲೋಟ ನೀರು ಕುಡಿಯುವುದು'' ಎನ್ನುತ್ತಾರೆ.
'' ಈ ಎಲ್ಲಾ ವಿಷಯಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತಾ ನೀವು ಬದಲಾವಣೆ ಕಾಣಬಹುದು. ದಿನಕ್ಕೆ ಎರಡು ಬಾರಿ ಮುಖ ತೊಳೆಯುವುದು, ಬಿಸಿಲಿನಿಂದ ಚರ್ಮವನ್ನು ಕಾಪಾಡಿಕೊಳ್ಳುವುದು ಮೊದಲಾದ ಕ್ರಮಗಳನ್ನು ರೂಢಿಸಿಕೊಳ್ಳಿ. ವಯಸ್ಸಾಗುವುದಾಗ ಏನು ಮಾಡುವುದು ಎಂಬ ಪ್ರಶ್ನೆ ನಿಮ್ಮಲ್ಲಿ ಬರಬಹುದು. ನಾನು ವಯಸ್ಸಾದ ಮೇಲೆಯೂ ಈ ಮೇಲಿನ ಅಭ್ಯಾಸಗಳನ್ನು ಬಿಡುವುದಿಲ್ಲ. ನಿಮಗೆ ವಯಸ್ಸಾಗುತ್ತಿದೆ ಎಂದು ಗೊತ್ತಾದ ತಕ್ಷಣ, ಕಣ್ಣಿನ ಸುತ್ತ ಕಪ್ಪು ಕಲೆಗಳು, ಕುಂದುಕಟ್ಟಿದ ಚರ್ಮ, ಸ್ಕಿನ್ ಟೋನ್ ಮೊದಲಾದವೆಲ್ಲ. ನಿಮ್ಮ ದೇಹ ದೇವಾಲಯ ಎಂದು ಹೇಳುತ್ತೀರಾದರೆ, ನಿಮ್ಮ ಮುಖವೂ ಕೂಡ ದೇವಾಲಯದ ತರಹವೇ. ನಿಮ್ಮ ದೇಹ ಮತ್ತು ಮುಖದ ಕಾಳಜಿಯನ್ನು ವಹಿಸಬೇಕು.
ಇಬ್ಬರು ಮಕ್ಕಳ ತಾಯಿಯಾಗಿರುವ ಕಾಜೊಲ್ ಶಾರೂಕ್ ಖಾನ್ ಜೊತೆಗೆ ದಿಲ್ ವಾಲೆ ಚಿತ್ರದಲ್ಲಿ ನಟಿಸಿದ ನಂತರ ಇದೀಗ ಓಲೆ ಟೋಟಲ್ ಎಫೆಕ್ಟ್ಸ್ ನ ಅಧಿಕೃತ ರಾಯಭಾರಿಯಾಗಿದ್ದಾರೆ. 2009ರಿಂದ ಇದರ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos