ನವದೆಹಲಿ: ಭಾರತೀಯ ಸಿನಿಮಾ ರಂಗದಲ್ಲೇ ಅತಿ ಉತ್ತಮ ಚಿತ್ರಗಳಲ್ಲಿ ಒಂದಪ ಎಂಬ ಹೆಗ್ಗಳಿಕೆ ಹೊಂದಿರುವ ಶೋಲೆ ಚಿತ್ರ ಅಮಿತಾಬ್ ಬಚ್ಚನ್ ಗೆ ವೃತ್ತಿ ಬದುಕಿನ ದೊಡ್ಡ ಮೈಲಿಗಲ್ಲಾಗಿದೆ.
ಆದರೆ ಶೋಲೆ ಚಿತ್ರದ ಜೈ ಪಾತ್ರಕ್ಕೆ ಅಮಿತಾಬ್ ಬಚ್ಚನ್ ಮೊದಲ ಆಯ್ಕೆಯಾಗಿರಲ್ಲಿಲ್ಲ ಎಂಬುದನ್ನು ಬಾಲಿವುಡ್ ನ ಮತ್ತೊಬ್ಬ ಹಿರಿಯ ನಟ ಶತೃಘ್ನ ಸಿನ್ಹಾ ತಿಳಿಸಿದ್ದಾರೆ.
ಶೋಲೆ ಚಿತ್ರಕ್ಕೆ ಮೊದಲು ನನ್ನನ್ನ ಆಯ್ಕೆ ಮಾಡಲಾಗಿತ್ತು, ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ನಾನು ಅದರಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆ ಅವಕಾಶ ಅಮಿತಾಬ್ ಬಚ್ಟನ್ ಅವರಿಗೆ ದೊರೆಯಿತು. ಅಮಿತಾಬ್ ಅಭಿನಯಿಸಿದ್ದು ನನಗೆ ತುಂಬಾ ಖುಷಿ ನೀಡಿದೆ ಎಂದು ಹೊಗಳಿದ್ದಾರೆ.
ರಮೇಶ್ ಸಿಪ್ಪಿ ನಿರ್ದೇಶನದ ಈ ಚಿತ್ರದಲ್ಲಿ ಮರೆಯಲಾಗದಂತ ಸಂಭಾಷಣೆಗಳಿವೆ. ಪ್ರೀತಿ, ಸ್ನೇಹ, ದ್ವೇಷದ ಕಥೆಯನ್ನು ಸಲೀಮ್ ಖಾನ್ ಮತ್ತು ಜಾವೇದ್ ಅಖ್ತರ್ ಪ್ರೇಕ್ಷಕರ ಮನ ಮುಟ್ಟುವಂತೆ ಬರೆದಿದ್ದಾರೆ ಎಂದು ತಿಳಿಸಿದರು.