IPL ಇತಿಹಾಸದಲ್ಲಿಯೇ ಶರವೇಗದಲ್ಲಿ ಅರ್ಧಶತಕ: ಉರ್ವಿಲ್ ಪಟೇಲ್ ಬ್ಯಾಟಿಂಗ್ ನೋಡುತ್ತಾ ನಿಂತ ಕೊಹ್ಲಿ! Video ವೈರಲ್

ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ 13 ಎಸೆತದಲ್ಲಿ 50 ರನ್ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.
Virat Kohli
ವಿರಾಟ್ ಕೊಹ್ಲಿ
Updated on

ರಾಯಪುರ: ಭಾನುವಾರ ಚೆನ್ನೈನಲ್ಲಿ ನಡೆದ ಐಪಿಎಲ್ 2026 ರ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉರ್ವಿಲ್ ಪಟೇಲ್ ಶರವೇಗದಲ್ಲಿ ದಾಖಲೆಯ ಅರ್ಧಶತಕ ಗಳಿಸಿದರು.

ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ 13 ಎಸೆತದಲ್ಲಿ 50 ರನ್ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ದಾಖಲೆಯನ್ನು ಉರ್ವಿಲ್ ಪಟೇಲ್ ಸರಿಗಟ್ಟಿದ್ದರು.

ಈ ಅತ್ಯಂತ ಸೊಬಗಿನ ಇನ್ನಿಂಗ್ಸ್ ನ್ನು ಆರ್ ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಕಣ್ತುಂಬಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಾಯಪುರದಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ವಿರುದ್ಧದ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದ ವಿರಾಟ್ ಕೊಹ್ಲಿ, ತಮ್ಮ ಅಭ್ಯಾಸದ ಅವಧಿಯಲ್ಲಿ ಸ್ವಲ್ಪ ವಿರಾಮ ಪಡೆದುಕೊಂಡು ಉರ್ವಿಲ್ ಬ್ಯಾಟಿಂಗ್ ನ್ನು ವೀಕ್ಷಿಸುತ್ತಿರುವುದು ಕಂಡುಬಂದಿದೆ.

ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡ ವೈರಲ್ ವೀಡಿಯೊದಲ್ಲಿ, ಕೊಹ್ಲಿ ಹೈಡ್ರೇಶನ್ ಬ್ರೇಕ್ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ನಡುವಿನ ಪಂದ್ಯವನ್ನು ವೀಕ್ಷಿಸುತ್ತಿರುವುದನ್ನು ನೋಡಬಹುದು. ಆ ವೇಳೆ ಉರ್ವಿಲ್ ತಮ್ಮ ಅದ್ಭುತ ಅರ್ಧಶತಕದ ಸಂಭ್ರಮಾಚರಣೆ ಮಾಡುತ್ತಿದ್ದರು.

204 ರನ್ ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಸಿಎಸ್ ಕೆ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಉರ್ವಿಲ್ ಪಟೇಲ್, ಸಿಂಗಲ್ ಮೂಲಕ ಅಖಾಡಕ್ಕಿಳಿದರು. ಬಳಿಕ ಅವೇಶ್ ಖಾನ್ ಅವರ ಮುಂದಿನ ಓವರ್ ನಲ್ಲಿ ಉರ್ವಿಲ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು. ದಿಗ್ವೇಶ್ ರಥಿಗೂ ಸತತ ಸತತ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ತದನಂತರ ಬಂದ ವೇಗಿ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲೂ ಮತ್ತೊಂದು ಸಿಕ್ಸರ್ ಬಾರಿಸಿದರು. ಅದೇ ಓವರ್ ನ ಕೊನೆಯ ಎಸತೆದಲ್ಲಿ ಸಿಂಗಲ್ ನೊಂದಿಗೆ ಅರ್ಧ ಶತಕ ಪೂರೈಸಿದರು.

ಉರ್ವಿಲ್ ಅವರು ಈ ಪಂದ್ಯದಲ್ಲಿ 23 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್‌ಗಳ ಸಹಿತ 65 ರನ್ ಗಳಿಸಿ ಔಟಾದರು. ಈ ಅತೀ ವೇಗದ ಅರ್ಧಶತಕದ ಸಾಧನೆಯನ್ನು ಅವರು ಅಮ್ಮಂದಿರ ದಿನದಂದೇ ಮಾಡಿರುವುದು ವಿಶೇಷವಾಗಿದೆ.

Virat Kohli
IPL 2026: ಕೊನೆಯ ಎಸೆತದಲ್ಲಿ RCBಗೆ ರೋಚಕ ಜಯ; MI ವಿರುದ್ಧದ ಪಂದ್ಯ ಗೆಲ್ಲಿಸಿದ ಕೃನಾಲ್, ಭುವಿ; ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!

50 ರನ್ ಪೂರೈಸಿದ ತಕ್ಷಣ ಉರ್ವಿಲ್ ತಮ್ಮ ಪ್ಯಾಂಟ್‌ ಜೇಬಿನಲ್ಲಿದ್ದ ಕಾಗದವನ್ನು ತೆಗೆದು ಪ್ರದರ್ಶಿಸಿದರು. ಅದರಲ್ಲಿ "ಇದು ನಿಮಗಾಗಿ ಅಪ್ಪಾ" (This is for you Papa) ಎಂದು ಬರೆಯಲಾಗಿತ್ತು. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. 27 ವರ್ಷದ ಉರ್ವಿಲ್ ಪಟೇಲ್ ಅವರ ಈ ಅಮೋಘ ದಾಖಲೆ ಮತ್ತು ತಂದೆಯ ಮೇಲಿನ ಪ್ರೀತಿಯ ಈ ನಡೆ ಕ್ರೀಡಾಭಿಮಾನಿಗಳ ಮನಗೆದ್ದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com