ಮಹಿರಾ ಖಾನ್ 
ಬಾಲಿವುಡ್

ಭಯೋತ್ಪಾದಕರ ದಾಳಿಯನ್ನು ಖಂಡಿಸಿದ ಪಾಕ್ ನಟಿ ಮಹಿರಾ ಖಾನ್

ಭಾರತ ಮತ್ತು ಪಾಕ್‌ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ವಿಚಾರವಾಗಿ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಪಾಕಿಸ್ತಾನಿ ನಟಿ ಮಹಿರಾ ಖಾನ್‌ ...

ನವದೆಹಲಿ: ಭಾರತ ಮತ್ತು ಪಾಕ್‌ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ವಿಚಾರವಾಗಿ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಪಾಕಿಸ್ತಾನಿ ನಟಿ ಮಹಿರಾ ಖಾನ್‌ ಉಗ್ರ ದಾಳಿಯನ್ನು ಖಂಡಿಸಿದ್ದಾರೆ. ಉಗ್ರ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ, ಜೀವ ಹಾನಿಯನ್ನು ಸಹಿಸಲಾಗದು. ಅದು ಯಾವ ದೇಶವೇ ಆಗರಲಿ,ಎಂದು ಮಹಿರಾ ಹೇಳಿದ್ದಾರೆ.

ಮುಂಬರುವ ಬಾಲಿವುಡ್‌ ಚಿತ್ರ ರಯೀಸ್‌ನಲ್ಲಿ ಶಾರೂಖ್‌ ಖಾನ್‌ ಜತೆ ಮಹಿರಾ ಖಾನ್‌ ನಟಿಸಿದ್ದಾರೆ. ಸೆಪ್ಟೆಂಬರ್‌ 18ರಂದು ಜಮ್ಮು ಕಾಶ್ಮೀರದ ಉರಿಯಲ್ಲಿ ಉಗ್ರ ದಾಳಿ ನಡೆದ ನಂತರ ಮಹಿರಾ ಇದೇ ಮೊದಲ ಬಾರಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಬಾಲಿವುಡ್‌ನಲ್ಲಿ ಕೆಲಸ ಮಾಡಿರುವ ಮತ್ತೊಬ್ಬ ಪಾಕ್‌ ನಟ ಫವದ್‌ ಖಾನ್‌ ಕೆಲ ದಿನಗಳ ಹಿಂದೆ, ವಿಶ್ವ ಶಾಂತಿಗಾಗಿ ಪ್ರಾರ್ಥನೆ ಮಾಡುವೆ ಎಂದಿದ್ದರು. ಇಬ್ಬರೂ ಪೇಸ್‌ಬುಕ್‌ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಾನು ಕಳೆದ 5 ವರ್ಷಗಳಿಂದ ಇಲ್ಲಿ ಅಭಿನಯಿಸುತ್ತಿದ್ದೇನೆ, ದೇಶದ ಗೌರವಕ್ಕೆ ಧಕ್ಕೆಯಾಗುವ ಯಾವುದೇ ರೀತಿಯ ಕೆಲಸವನ್ನು ನಾನು ಮಾಡಿಲ್ಲ. ನಾನೊಬ್ಬಳು ಪಾಕಿಸ್ತಾನದ ನಾಗರಿಕಳಾಗಿದ್ದೇನೆ,ನಾನು ಉಗ್ರ ವಾದವನ್ನು ಸಹಿಸೊಲ್ಲ, ಮಾನವರ ಜೀವ ಹಾನಿಯನ್ನ ಸಹಿಸಲಾಗದು ಎಂದು ಖಂಡಿಸಿದ್ದಾರೆ. ಪ್ರಪಂಚ ಶಾಂತಿ ನೆಮ್ಮದಿಯಿಂದ ಇರಬೇಕೆಂದು ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT