ನಟಿ ಶ್ರೇಯ ಜತೆ ಬ್ರಾವೋ ಡೇಟಿಂಗ್!
ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ನಟಿ ಶ್ರೇಯಾ ಸರಣ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ...
ಮುಂಬೈ: ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇಯ್ನ್ ಬ್ರಾವೋ ನಟಿ ಶ್ರೇಯಾ ಸರಣ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಶ್ರೇಯಾ ಹಾಗೂ ಬ್ರಾವೋ ಮುಂಬೈನ ಹೊಟೇಲ್ ವೊಂದರಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದು ಇಬ್ಬರು ಡೇಟಿಂಗ್ ನಡೆಸುತ್ತಿರುವುದಕ್ಕೆ ಇದು ಸಾಕ್ಷಿ ಎಂಬಂತಿದೆ. ಇಬ್ಬರು ಒಂದೇ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡರು. ನಟಿ ಶ್ರೇಯಾ ಸರಣ್ ಕೊಂಚ ನಾಚಿಕೊಂಡಂತೆ ಕಾರಿನತ್ತ ಓಡಿದರೇ, ಬ್ರಾವೋ ನಗುನಗುತ್ತಾಲೇ ಫೋಟೋಗಳಿಗೆ ಪೋಸ್ ನೀಡಿದರು.
ಹಿಂದಿಯ ರಿಯಾಲಿಟಿ ಶೋ ಜಲಕ್ ಧಿಕ್ ಲಾಜಾ ಮತ್ತು ತುಮ್ ಬಿನ್ 2 ಚಿತ್ರದಲ್ಲಿ ನಟಿ ನೇಹಾ ಶರ್ಮಾರೊಂದಿಗೆ ಹಾಡೊಂದರ ಚಿತ್ರೀಕರಣಕ್ಕಾಗಿ ಬ್ರಾವೋ ಮುಂಬೈಗೆ ಆಗಮಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.