ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದ್ದು 8 ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದೆ.
ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರ ಬಿಡುಗಡೆಯಾಗಿ ಮೂರನೇ ದಿನಕ್ಕೆ 50 ಕೋಟಿ ಗಳಿಸಿದ್ದ ಚಿತ್ರ ಇದೀಗ ನೂರು ಕೋಟಿ ಕ್ಲಬ್ ಸೇರಿದೆ. ಅಕ್ಷಯ್ ಕುಮಾರ್ ನಟನೆಯ ಚಿತ್ರಗಳು ಆರೇಳು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದೆ.
ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅಭಿನಯದ ಟ್ಯೂಬ್ ಲೈಟ್ ಮತ್ತು ಜಬ್ ಹ್ಯಾರಿ ಮೆಟ್ ಸೆಜಲ್ ಚಿತ್ರ ಗಳು ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದ್ದು ಅಕ್ಷಯ್ ಕುಮಾರ್ ನಟನೆಯ ಚಿತ್ರ ಅಬ್ಬರದ ಪ್ರದರ್ಶನ ಕಾಣುತ್ತಿದೆ.
ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೆ ಜೋಡಿಯಾಗಿ ಭೂಮಿ ಪೆಡ್ನೆಕರ್ ಮತ್ತು ಅನುಪಮ್ ಖೇರ್ ಅಭಿನಯಿಸಿದ್ದಾರೆ. ಚಿತ್ರವನ್ನು ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸಿದ್ದಾರೆ.