ನಿನ್ನೆ ದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿ ಆರತಕ್ಷತೆಗೆ ಆಹ್ವಾನಿಸಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ 
ಬಾಲಿವುಡ್

ದೆಹಲಿಯಲ್ಲಿ ಇಂದು ಸಂಜೆ ನಡೆಯುವ ಆರತಕ್ಷತೆಗೆ ಪ್ರಧಾನಿಯನ್ನು ಆಹ್ವಾನಿಸಿದ ವಿರುಷ್ಕಾ

ಇಟಲಿಯ ಟಸ್ಕನಿ ನಗರದಲ್ಲಿ ಅದ್ದೂರಿ ವಿವಾಹ ಮಾಡಿಕೊಂಡು ದೆಹಲಿಗೆ ಮರಳಿರುವ ಖ್ಯಾತ ಜೋಡಿ...

ಇಟಲಿಯ ಟಸ್ಕನಿ ನಗರದಲ್ಲಿ ಅದ್ದೂರಿ ವಿವಾಹ ಮಾಡಿಕೊಂಡು ದೆಹಲಿಗೆ ಮರಳಿರುವ ಖ್ಯಾತ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಇದೀಗ ಆರತಕ್ಷತೆಗೆ ಅಣಿಯಾಗಿದ್ದಾರೆ. ತಮ್ಮ ಮದುವೆಗೆ ಹತ್ತಿರದ ಬಂಧುಗಳು ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಿದ್ದ ದಂಪತಿ ಇದೀಗ ಆರತಕ್ಷತೆಗೆ ಗಣ್ಯರನ್ನು ಆಹ್ವಾನಿಸಿದ್ದಾರೆ.
ಇಂದು ಸಾಯಂಕಾಲ ದೆಹಲಿಯಲ್ಲಿ ನಡೆಯಲಿರುವ ಅದ್ದೂರಿ ಆರತಕ್ಷತೆಗೆ ವಿರಾಟ್ ಮತ್ತು ಅನುಷ್ಕಾ ನಿನ್ನೆ ಪ್ರಧಾನಿಯವರನ್ನು ಖುದ್ದಾಗಿ ಭೇಟಿ ಮಾಡಿ ಆಹ್ವಾನಿಸಿದರು. ನಿನ್ನೆ ಪ್ರಧಾನಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪ್ರಧಾನಿ ಇಬ್ಬರನ್ನೂ ಅಭಿನಂದಿಸಿದರು. ಈ ಚಿತ್ರವನ್ನು ಪ್ರೆಸ್ ಇನ್ಫರ್ಮೇಶ ನ್ ಬ್ಯೂರೊ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಪ್ರಧಾನ ಮಂತ್ರಿ ಕಚೇರಿ ಕೂಡ ಟ್ವಿಟ್ಟರ್ ನಲ್ಲಿ ಇಬ್ಬರ ಭೇಟಿಯನ್ನು ಪೋಟೋ ಸಮೇತ ಪ್ರಕಟಿಸಿದೆ. 
ಕಡು ನೀಲಿ ಬಣ್ಣದ ಸಲ್ವಾರ್ ಕಮೀಜ್ ನಲ್ಲಿ ಅನುಷ್ಕಾ ಆಗಮಿಸಿದ್ದರೆ ವಿರಾಟ್ ಕೊಹ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಶೈಲಿಯ ಕುರ್ತಾದಲ್ಲಿ ಮಿಂಚಿದ್ದರು. ಪ್ರಧಾನಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ವಿರಾಟ್ ಅವರ ಸೋದರ ಕೂಡ ಇದ್ದರು.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಮದುವೆಗೆ ಸವ್ಯಸಾಚಿ ಮುಖರ್ಜಿ ಅವರು ವಿನ್ಯಾಸಗೊಳಿಸಿದ ಗುಲಾಬಿ ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ್ದರು. ಇಂದು ಸಂಜೆ ಆರತಕ್ಷತೆ ದೆಹಲಿಯಲ್ಲಿ ನಡೆದರೆ ಇದೇ 26ರಂದು ಮುಂಬೈಯಲ್ಲಿ ಸಿನಿಮಾ ಮತ್ತು ಕ್ರಿಕೆಟ್ ಜಗತ್ತಿನ ಗಣ್ಯರಿಗೆ ಮತ್ತು ಸೆಲೆಬ್ರಿಟಿಗಳಿಗೆ ಪಾರ್ಟಿ ಏರ್ಪಡಿಸಲಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ನಡೆಯುವ ಆರತಕ್ಷತೆಯಲ್ಲಿ ಯಾರ್ಯಾರು ಭಾಗವಹಿಸುತ್ತಾರೆ ಎಂಬುದನ್ನು ನೋಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

IPL 2026 Eliminator: SRH ವಿರುದ್ಧ ವೈಭವ್ ಸೂರ್ಯವಂಶಿ ಸಿಕ್ಸರ್ ಸುರಿಮಳೆ, 14 ವರ್ಷ ಹಳೆಯ Chris gayle ದಾಖಲೆ ಧೂಳಿಪಟ

SCROLL FOR NEXT