ಮುಂಬೈ: ನಟ ವರುಣ್ ಧವನ್ ಮತ್ತು ತಮಗೆ ಹೋಲಿಕೆಗಳನ್ನು ಮಾಡುತ್ತಿರುವದು ಎತ್ತಣ ಸಂಬಂಧವಯ್ಯ ಎಂದು ಹಿರಿಯ ಬಾಲಿವುಡ್ ನಟ ಗೋವಿಂದ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ತಿಳಿ ಹಾಸ್ಯದ ಶೈಲಿಯಲ್ಲಿ ನಟಿಸುವ ವರುಣ್ ಧವನ್ ಅವರನ್ನು ನವ ಯುಗದ ಗೋವಿಂದ ಎಂದೇ ಕರೆಯಲಾಗುತ್ತದೆ. ಆದರೆ ಈ ಹೋಲಿಕೆ ನಕಲು ಎಂದು ಬಣ್ಣಿಸಿದ್ದಾರೆ ಗೋವಿಂದ.
"ರಣವೀರ್ ಸಿಂಗ್ ಮತ್ತು ವರುಣ್ ಧವನ್ ಇಬ್ಬರಿಗೂ ಸಲ್ಮಾನ್ ಖಾನ್ ರೀತಿಯ ದೇಹವಿದೆ. ಆದರೆ ಅದನ್ನು ಅವರು ಹೇಳುವಂತಿಲ್ಲ. ಅವರು ಸಲ್ಮಾನ್ ಖಾನ್ ಎಂದು ಕರೆದುಕೊಂಡರೆ ಅವರಿಗೆ ಸಿನೆಮಾಗಳು ಸಿಗುವುದಿಲ್ಲ. ಅವರು ಖಾನ್ ಎದುರು ಹೋಗಲು ಸಾಧ್ಯವಿಲ್ಲ. ಸಿನಿಮಾರಂಗ ಕೆಲಸ ಮಾಡುವುದೇ ಹೀಗೆ" ಎಂದು 'ಆ ಗಯೇ ಹೀರೊ' ಸಿನೆಮಾದ ಕಾರ್ಯಕ್ರಮದಲ್ಲಿ ಅವರು ಗುರುವಾರ ಹೇಳಿದ್ದಾರೆ.
"ಅವರು (ವರುಣ್) ನನ್ನ ರೀತಿ ನಟಿಸಲು ಹೇಗೆ ಸಾಧ್ಯ? ಅವರು ಗೋವಿಂದನಾಗಲು ಮುಗ್ಧನಾಗಿರಬೇಕು, ಅವಿದ್ಯಾವಂತ ಮತ್ತು ಬಡ ಹಳ್ಳಿಯವನಾಗಿರಬೇಕು. ವರುಣ್ ಅವರು ನಿರ್ದೇಶಕರ ಪುತ್ರ. ಕಳೆದ ಆರು ವರ್ಷಗಳಲ್ಲಿ ಅವರು ತಮ್ಮ ತಂದೆಯ ಜೊತೆಗೆ ೨ ಸಿನಿಮಾಗಳಿಗಿಂತ ಹೆಚ್ಚು ನಟಿಸಿಲ್ಲ, ಆದರೆ ನಾನು ಅವರ ತಂದೆಯ (ಡೇವಿಡ್ ಧವನ್) ಜೊತೆಗೆ ೧೭ ಸಿನೆಮಾಗಳಲ್ಲಿ ನಟಿಸಿದ್ದೆ" ಎಂದು ಕೂಡ ಗೋವಿಂದ ಹೇಳಿದ್ದಾರೆ.
೧೯೯೦ ರಲ್ಲಿ ಗೋವಿಂದ ಮತ್ತು ಡೇವಿಡ್ ಧವನ್ ಜೋಡಿ 'ಜೋಡಿ ನಂ. ೧' ಎಂಬ ಸೂಪರ್ ಹಿಟ್ ಸಿನೆಮಾ ನೀಡಿತ್ತು. ಆದರೆ ನಂತರದ ವರ್ಷಗಳಲ್ಲಿ ಇಬ್ಬರೂ ದೂರವಾಗಿದ್ದರು.
ಇದರ ಬಗ್ಗೆ ಮಾತನಾಡಿದ ಗೋವಿಂದ "ನನ್ನ ಜೊತೆಗೆ ೧೮ ನೇ ಸಿನೆಮಾ ಮಾಡುವುದಕ್ಕೆ ಡೇವಿಡ್ ಅವರಿಗೆ ಕೇಳಿದಾಗ, ಆ ವಿಷಯ ತೆಗೆದುಕೊಂಡು, ರಿಷಿ ಕಪೂರ್ ಜೊತೆಗೆ 'ಛಷ್ಮೆ ಬಡ್ಡೂರ್' ಮಾಡಿಬಿಟ್ಟರು.
"ನನ್ನನು ಅತಿಥಿ ನಟನಾಗಿಯಾದರು ತೊಡಗಿಸಿಕೊಳ್ಳಲು ಕೇಳಿಕೊಂಡೆ. ಅವರು ಅದನ್ನೂ ಮಾಡಲಿಲ್ಲ. ತದನಂತರ ನಾನು ಅವರನ್ನು ಕೆಲವು ವರ್ಷಗಳವರೆಗೆ ಭೇಟಿ ಮಾಡಲಿಲ್ಲ. ನಂತರವೂ ಸಾಕಷ್ಟು ಬಾರಿ ಮನವಿ ಮಾಡಿಕೊಂಡೆ ಆದರೆ ಅವರು ಕೇಳಿಸಿಕೊಳ್ಳಲೇ ಇಲ್ಲ" ಎಂದು ಕೂಡ ಗೋವಿಂದ ಹೇಳಿದ್ದಾರೆ.
ಗೋವಿಂದ ಅವರೇ ನಿರ್ಮಿಸಿರುವ, ದೀಪಾಂಕರ್ ಸೇನಾಪತಿ ನಿರ್ದೇಶನದ 'ಆ ಗಯಾ ಹೀರೊ' ಸಿನೆಮಾವನ್ನು ಅವರು ಎದುರು ನೋಡುತ್ತಿದ್ದು, ಮಾರ್ಚ್ ೩ ಕ್ಕೆ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos