ಮುಂಬೈ: ಗುರುನಂದನ್ ನನಟನೆಯ 'ರಾಜು ಕನ್ನಡ ಮೀಡಿಯಂ' ಸ್ಯಾಂಡಲ್ವುಡ್ ಚಿತ್ರ ಚಿತ್ರೀಕರಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿಯೇ, ಅಂತಹುದೇ ಶೀರ್ಷಿಕೆ ಹೊತ್ತ, ಬಾಲಿವುಡ್ ನ ಖ್ಯಾತ ನಟ ಇರ್ಫಾನ್ ಖಾನ್ ನಟನೆಯ 'ಹಿಂದಿ ಮೀಡಿಯಂ' ಸಿನೆಮಾ ಮೇ ೧೨ ಕ್ಕೆ ತೆರೆ ಕಾಣಲಿದೆ.
ಸಾಕೇತ್ ಚೌಧರಿ ನಿರ್ದೇಶನದ ಈ ಚಿತ್ರದ ಟೀಸರ್ ಪೋಸ್ಟರ್ ಗುರುವಾರ ಬಿಡುಗಡೆಯಾಗಿದೆ.
ಇದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಇರ್ಫಾನ್ ಖಾನ್ "ಶಾಲೆಗೆ ಹಿಂದಿರುಗುವ ಸಮಯ. 'ಹಿಂದಿ ಮೀಡಿಯಂ'ನ ಟೀಸರ್ ಪೋಸ್ಟರ್" ಎಂದು ಬರೆದಿದ್ದಾರೆ.
ದಿನೇಶ್ ವಿಜನ್ ಮತ್ತು ಭೂಷಣ್ ಕುಮಾರ್ ಸಹ ನಿರ್ಮಾಣದ ಈ ಚಿತ್ರದಲ್ಲಿ ಪಾಕಿಸ್ತಾನಿ ನಟಿ ಸಬ ಕಮರ್ ಕೂಡ ನಟಿಸಿದ್ದಾರೆ.