ಜೈಪುರ: ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ರಾಜಕಾರಣಿಗಳ ಹೆಸರನ್ನು ನಾಮಕರಣ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಾಲಿವುಡ್ ನಟ ರಿಷಿ ಕಪೂರ್, ರಾಜಕಾರಣಿಗಳ ಹೆಸರಿನ ಬದಲು ದೇಶಕ್ಕೆ ನಿಜವಾದ ಕೊಡುಗೆ ನೀಡಿದವರ ಹೆಸರನ್ನು ನಾಮಕರಣ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷವೂ ಇದೇ ರೀತಿಯಲ್ಲಿ ಪ್ರಶ್ನೆ ಮಾಡಿದ್ದ ರಿಷಿ ಕಪೂರ್, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಿಗೆ ಗಾಂಧಿ ಕುಟುಂಬದವರ ಹೆಸರನ್ನು ನಾಮಕರಣ ಮಾಡಿರುವ ಮಾಡುತ್ತಿರುವುದನ್ನು ಪ್ರಶ್ನಿಸಿದ್ದರು. " ಸಾರ್ವಜನಿಕ ಆಸ್ತಿಪಾಸ್ತಿಗೆ ರಾಜಕಾರಣಿಗಳ ಹೆಸರನ್ನು ನಾಮಕರಣ ಮಾಡಬಾರದು ಎಂದು ಹಿಂದಿನಿಂದಲೂ ಹೇಳುತ್ತಿದ್ದೇನೆ, ದೇಶಕ್ಕೆ ಕೊಡುಗೆ ನೀಡಿದವರಿದ್ದಾರೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ರಿಷಿ ಕಪೂರ್ ಅಭಿಪ್ರಾಯಪಟ್ಟಿದ್ದಾರೆ
ಲತಾ ಮಂಗೇಷ್ಕರ್, ಜೆಆರ್ ಡಿ ಟಾಟಾ ಅವರ ಕೊಡುಗೆಗಳನ್ನು ಮರೆಯುವುದಕ್ಕೆ ಸಾಧ್ಯವೆ? ರಾಜಕಾರಣಿಗಳ ಬದಲು ಇಂತಹವರ ಹೆಸರನ್ನು ಏಕೆ ನಾಮಕರಣ ಮಾಡಲು ಸಾಧ್ಯವಿಲ್ಲ ಎಂದು ಜೈಪುರ ಸಾಹಿತ್ಯ ಹಬ್ಬದಲ್ಲಿ ರಿಷಿ ಕಪೂರ್ ಪ್ರಶ್ನಿಸಿದ್ದಾರೆ. ನೋಟು ನಿಷೇಧದ ಬಗ್ಗೆಯೂ ಮಾತನಾಡಿರುವ ರಿಷಿ ಕಪೂರ್, ನೋಟು ನಿಷೇಧದಿಂದ ಬಾಲಿವುಡ್ ಗೆ ಹೊಡೆತ ಬಿದ್ದಿಲ್ಲ ಎಂದು ಹೇಳಿದ್ದಾರೆ.