ಮುಂಬಯಿ: ಜೈಪುರದಲ್ಲಿ ಪದ್ಮಾವತಿ ಚಿತ್ರದ ಶೂಟಿಂಗ್ ವೇಳೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮೇಲಿನ ಹಲ್ಲೆ ಖಂಡಿಸಿರುವ ನಿರ್ಮಾಪಕ ವಿಕ್ರಮ್ ಭಟ್, ಇಡೀ ಘಟನೆ ದುರಾದೃಷ್ಟಕರ ಎಂದಿದ್ದಾರೆ.
ಸಿನಿಮಾ ನಿರ್ಮಾಪಕರು ಮತ್ತು ಕಲಾವಿದರು ಗಾಜಿನ ಮನೆಯಲ್ಲಿ ಜೀವಿಸುತ್ತಾರೆ. ಯಾವಾಗ ನಮ್ಮ ಮನೆ ಮೇಲೆ ಕಲ್ಲು ಬೀಳುತ್ತದೋ ಎಂದು ಸದಾ ನಾವು ಭಯದಲ್ಲೇ ಬದುಕುತ್ತಿರುತ್ತೇವೆ, ನಮಗೆ ರಕ್ಷಣೆ ಇಲ್ಲ ಎಂದು ಅವರು ದೂರಿದ್ದಾರೆ.
ಇದಕ್ಕೆ ಪರಿಹಾರ ಏನು ಎಂಬುದು ತಿಳಿಯುತ್ತಿಲ್ಲ, ನಮ್ಮ ಇಡಿ ಬಾಲಿವುಡ್ ಸಿನಿಮಾ ರಂಗ ಬನ್ಸಾಲಿ ಅವರ ಜೊತೆಯಲ್ಲಿದೆ. ಘಟನೆ ನಂತರ ನನ್ನ ರಕ್ತ ಕುದಿಯುತ್ತಿದೆ, ಆದರೆ ಏನನ್ನೂ ಮಾಡಲು ನಾವು ಶಕ್ತರಾಗಿಲ್ಲ, ನಾವು ಅಸಹಾಯಕರು ಎಂದು ಹೇಳಿದ್ದಾರೆ.
ಶ್ರೀ ರಾಜಪೂತ್ ಕರ್ಣಿ ಸೇನೆ ಪದ್ಮಾವತಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮೇಲೆ ನಡೆಸಿದ ಹಲ್ಲೆಗೆ ಇಡೀ ಬಿಟೌನ್ ಖಂಡಿಸಿದೆ. ಹಲ್ಲೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.