ಬಾಲಿವುಡ್

ತಮ್ಮ ಪ್ರಶಸ್ತಿಯನ್ನು ಭಾರತೀಯ ಸೇನೆಗೆ ಅರ್ಪಿಸಿದ ಮಧುರ್ ಭಂಡಾರ್ಕರ್

Lingaraj Badiger
ನ್ಯೂಯಾರ್ಕ್: ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು ಶನಿವಾರ ತಾವು ಸ್ವೀಕರಿಸಿದ ಭಾರತ ಗೌರವ ಪ್ರಶಸ್ತಿಯನ್ನು ಭಾರತೀಯ ಶಶಸ್ತ್ರ ಪಡೆಗಳಿಗೆ ಅರ್ಪಿಸಿದ್ದಾರೆ.
ನ್ಯೂಯಾರ್ಕ್ ನ ಯುಎನ್ ಹಾಲ್ ನಲ್ಲಿ ಭಾರತ ಗೌರವ ಪ್ರಶಸ್ತಿ ಸ್ವೀಕರಿಸುತ್ತಿರುವುದು ತುಂಬಾ ಹೆಮ್ಮೆ ಅನಿಸುತ್ತಿದೆ. ನಾನು ಈ ಪ್ರಶಸ್ತಿಯನ್ನು ತುಂಬಾ ವಿನಯಪೂರ್ವಕವಾಗಿ ನಮ್ಮ ಹೆಮ್ಮೆಯ ಭಾರತೀಯ ಶಶಸ್ತ್ರ ಪೆಡೆಗಳಿಗೆ ಮತ್ತು ಅವರ ಕುಟುಂಬಕ್ಕೆ ಅರ್ಪಿಸುತ್ತೇನೆ ಎಂದು ಭಂಡಾರ್ಕರ್ ಅವರು ಟ್ವೀಟ್ ಮಾಡಿದ್ದಾರೆ.
ಪದ್ಮ ಶ್ರೀ ಪ್ರಶಸ್ತಿ ವಿಜೇತರಾಗಿರುವ ಮಧುರ್ ಭಂಡಾರ್ಕರ್ ಅವರು, ಟ್ರಾಫಿಕ್ ಸಿಗ್ನಲ್, ಚಾದ್ನಿ ಬಾರ್, ಫ್ಯಾಷನ್ ಹಾಗೂ ಪೇಜ್ 3 ಸೇರಿದಂತೆ ಹಲವು ಸಾಮಾಜಿಕ ಕಳಕಳಿಯುಳ್ಳಂತಹ ಚಿತ್ರಗಳನ್ನು ಮಾಡಿದ್ದಾರೆ.
ಭಾರತ ಗೌರವ ಪ್ರಶಸ್ತಿ ಪಡೆದ ಬಾಲಿವುಡ್ ನಿರ್ದೇಶಕನಿಗೆ ಹಿರಿಯ ನಟ ಅನುಪಮ್ ಖೇರ್ ಅವರು ಅಭಿನಂದಿಸಿದ್ದಾರೆ.
SCROLL FOR NEXT