ಐಶ್ವರ್ಯ ರೈ ಬಚ್ಚನ್-ಅಭಿಷೇಕ್ ಬಚ್ಚನ್ 
ಬಾಲಿವುಡ್

ಐಶ್ವರ್ಯ ಜೊತೆಗೆ ಸಿನೆಮಾ; ಇನ್ನು ಮಾತುಕತೆಯಲ್ಲಿದೆ ಎಂದ ಅಭಿಷೇಕ್

ನಿಜ ಜೀವನದ ಸಂಗಾತಿಗಳು ಸಿನೆಮಾವೊಂದರಲ್ಲಿ ಬೆಳ್ಳಿ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿತ್ತು. ಇನ್ನು ಮಾತುಕತೆ ಜಾರಿಯಲ್ಲಿದೆ ಎಂದು ಈ

ಮುಂಬೈ: ನಿಜ ಜೀವನದ ಸಂಗಾತಿಗಳು ಸಿನೆಮಾವೊಂದರಲ್ಲಿ ಬೆಳ್ಳಿ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿತ್ತು. ಇನ್ನು ಮಾತುಕತೆ ಜಾರಿಯಲ್ಲಿದೆ ಎಂದು ಈ ವದಂತಿಯೂ ಬಗ್ಗೆ ಪ್ರತಿಕ್ರಿಯಿಸಿರುವ ನಟ ಅಭಿಷೇಕ್ ಬಚ್ಚನ್, ನಿರ್ಮಾಪಕರ ಘೋಷಣೆಗೆ ಕಾಯುವುದು ಸೂಕ್ತ ಎನ್ನುತ್ತಾರೆ. 
ಅನುರಾಗ್ ಕಶ್ಯಪ್ ನಿರ್ಮಾಣ ಸಂಸ್ಥೆಯ 'ಗುಲಾಬ್ ಜಾಮೂನ್'ನಲ್ಲಿ ಅಭಿಷೇಕ್ ಮತ್ತು ಐಶ್ವರ್ಯ ರೈ ಬಚ್ಚನ್ ಒಟ್ಟಿಗೆ ನಟಿಸಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿದ್ದವು.
ಇದರ ಬಗ್ಗೆ ಅಭಿಷೇಕ್ ಅವರನ್ನು ಪ್ರಶ್ನಿಸಿದಾಗ "ಆ ಸಿನೆಮಾವನ್ನು ಅನುರಾಗ್ ಕಶ್ಯಪ್ ನಿರ್ದೇಶಿಸುತ್ತಿಲ್ಲ. ಹೊಸ ನಿರ್ದೇಶಕರೊಬ್ಬರು ಅದನ್ನು ನಿರ್ದೇಶಿಸಲಿದ್ದಾರೆ. ಅನುರಾಗ್ ಕಶ್ಯಪ್ ನಿರ್ಮಾಪಕ. ಇದಕ್ಕಾಗಿ ನಿರ್ಮಾಪಕರ ಜೊತೆ ಮಾತುಕತೆ ಇನ್ನು ಜಾರಿಯಲ್ಲಿದ್ದು ಸದ್ಯಕ್ಕೆ ನಾನು ಏನನ್ನು ಧೃಢೀಕರಿಸುವ ಸ್ಥಿತಿಯಲ್ಲಿಲ್ಲ. ಇದರ ಬಗ್ಗೆ ಘೋಷಣೆ ಮಾಡಲು ನಿರ್ಮಾಪಕರೇ ಸೂಕ್ತ" ಎನ್ನುತ್ತಾರೆ. 
ತಮ್ಮ ಸಿನೆಮಾ 'ಬಾರ್ಡರ್'ಗೆ ೨೦ ವರ್ಷ ತುಂಬಿದ ಸಂಭ್ರಮಾಚರಣೆಯಲ್ಲಿ ಅಭಿಷೇಕ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. 
'ಬಾರ್ಡರ್' ಸಿನೆಮಾವನ್ನು ಜೆ ಪಿ ದತ್ತ ನಿರ್ದೇಶಿಸಿದ್ದರು. ಅಭಿಷೇಕ್ ಬಚ್ಚನ್ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ 'ರಿಫ್ಯುಜಿ' ಸಿನೆಮಾವನ್ನು ಕೂಡ ದತ್ತ ಅವರೇ ನಿರ್ದೇಶಿಸಿದ್ದರು. 'ಬಾರ್ಡರ್' ಸಿನೆಮಾದ ಎರಡನೇ ಬಾಗ ಬರಲಿದೆಯೆ ಎಂಬ ಪ್ರಶ್ನೆಗೆ "ಜೆಪಿ ದತ್ತ ಅವರಿಗೆ ಮಾತ್ರ ಅದು ಸಾಧ್ಯ ಆದರೆ ಅದನ್ನು ಮಾಡಲು ಅವರು ಸಿದ್ಧರಿಲ್ಲ" ಎಂದು ಕೂಡ ಅಭಿಷೇಕ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್