ಪ್ರಿಯಾಂಕಾ ಚೋಪ್ರಾ 
ಬಾಲಿವುಡ್

ಪ್ರಿಯಾಂಕಾ ಚೋಪ್ರಾ ಈಗ ನಂ.1 ನಟಿ

ಬಾಲಿವುಡ್, ಹಾಲಿವುಡ್ ನಟಿ ಹಾಗೂ ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಅವರು ಈಗ ಟಾಪ್ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ....

ಲಾಸ್ ಎಂಜಲೀಸ್: ಬಾಲಿವುಡ್, ಹಾಲಿವುಡ್ ನಟಿ ಹಾಗೂ ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಅವರು ಈಗ ಟಾಪ್ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ತಮ್ಮ 'ಬೇ ವಾಚ್' ಸಹ ನಟರಾದ ಡ್ವೇಯ್ನ್ ಜಾನ್ಸನ್ ಮತ್ತು ಝಾಕ್ ಎಫ್ರಾನ್ ಅವರನ್ನು ಹಿಂದಿಕ್ಕಿದ್ದಾರೆ.
ಒಂದು ವಾರಗಳ ಹಿಂದಷ್ಟೇ ಹಾಲಿವುಡ್ ರಿಪೋರ್ಟರ್ಸ್ ಇನಾಗರಲ್ ಟಾಪ್ ಆಕ್ಟರ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಪ್ರಿಯಾಂಕ ಚೋಪ್ರಾ ಈಗ ನಂಬರ್ 1 ಸ್ಥಾನದಲ್ಲಿದ್ದ ಜಾನ್ಸನ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.
ಸಾಮಾಜಿಕ ತಾಣಗಳಾದ ಫೇಸ್ ಬುಕ್, ಇನ್ಸ್ಟಾ ಗ್ರಾಮ್, ಟ್ವೀಟರ್, ಯ್ಯೂಟುಬ್ ಹಾಗೂ ಗೂಗಲ್ ಪ್ಲಸ್ ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ನಟ, ನಟಿಯರನ್ನು ಟಾಪ್ ಆಕ್ಟರ್ಸ್ ಪಟ್ಟಿಗೆ ಆಯ್ಕೆ ಮಾಡಲಾಗಿದೆ. 
ಸಾಮಾಜಿಕ ಮಾಧ್ಯಮಗಳ ವಿಶ್ಲೇಷಣಾ ಕಂಪನಿ ಎಂ.ವಿ.ಪಿಂಡೇಕ್ಸ್ ನೀಡಿದ ಅಂಕಿ ಅಂಶಗಳ ಆಧಾರದ ಮೇಲೆ ವಾರಕ್ಕೊಮ್ಮೆ ಈ ಟಾಪ್ ಆಕ್ಟರ್ಸ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಜನಪ್ರಿಯ ಕ್ವಾಂಟಿಕೊ ಟಿವಿ ಶೋ ಮೂಲಕ ಹಾಲಿವುಡ್ ನಲ್ಲಿ ಈಗಾಗಲೇ ಹೆಸರು ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ