ಬಾಲಿವುಡ್ ನಟಿ ಕಂಗನಾ ರಣೌತ್ 
ಬಾಲಿವುಡ್

ಬಾಲಿವುಡ್ ಬಿಟ್ಟು ಹೋಗುವಂತೆ ಹೇಳಲು ಕರಣ್ ಯಾರು?: ಕಂಗನಾ ರಣೌತ್

ಬಾಲಿವುಡ್ ಬಿಟ್ಟು ಹೋಗುವಂತೆ ಹೇಳಲು ಕರಣ್ ಯಾರು? ಚಿತ್ರರಂಗ ಬಿಟ್ಟು ಹೋಗುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ. ನನ್ನ ಹೋರಾಟ ಕರಣ್ ಜೋಹರ್ ವಿರುದ್ಧವಲ್ಲ, ದುರಭಿಮಾನದ ವಿರುದ್ಧವಾಗಿದೆ ಎಂದು ಬಾಲಿವುಡ್ ನಟಿ ಕಂಗನಾ ರಣೌತ್ ಅವರು...

ಮುಂಬೈ: ಬಾಲಿವುಡ್ ಬಿಟ್ಟು ಹೋಗುವಂತೆ ಹೇಳಲು ಕರಣ್ ಯಾರು? ಚಿತ್ರರಂಗ ಬಿಟ್ಟು ಹೋಗುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ. ನನ್ನ ಹೋರಾಟ ಕರಣ್ ಜೋಹರ್ ವಿರುದ್ಧವಲ್ಲ, ದುರಭಿಮಾನದ ವಿರುದ್ಧವಾಗಿದೆ ಎಂದು ಅವರು ಗುರುವಾರ ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಹೋಗಿದ್ದ ಕಂಗನಾ ಅವರು ನೇರವಾಗಿಯೇ ಕರಣ್ ಅವರನ್ನು ಸ್ವಜನಪಕ್ಷಪಾತಿ, ಮೂವೀ ಮಾಫಿಯಾ ನಡೆಸುತ್ತಿದ್ದಾರೆಂದು ಆರೋಪಿಸಿದ್ದರು. ಕಂಗನಾ ಇಷ್ಟೆಲ್ಲಾ ಆರೋಪ ಮಾಡುತ್ತಿದ್ದರೂ, ಕರಣ್ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. 
ಆದರೆ, ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಈ ಬಗ್ಗೆ ತಮ್ಮ ಮೌನ ಮುರಿದಿದ್ದ ಕರಣ್, ಕಂಗಾನಾ ನನ್ನ ಕಾರ್ಯಕ್ರಮದ ಅತಿಥಿಯಾಗಿ ಬಂದಿದ್ದರು. ಅವರ ಅಭಿಪ್ರಾಯ ಹೇಳುವ ಹಕ್ಕು ಅವರಿಗಿದೆ. ಅವರು ಹೇಳುವುದನ್ನು ನಾನು ಕೇಳಬೇಕಾಗುತ್ತದೆ. ಆದರೆ, ಕಂಗನಾ ನನ್ನನ್ನು ಸ್ವಜನಪಕ್ಷಪಾತಿ ಎನ್ನಲು ನಾನು ನನ್ನ ಮಗ, ಮಗಳು ಸಂಬಂಧಿಕರೊಂದಿಗೆ ಕೆಲಸ ಮಾಡುತ್ತಿದ್ದೇನೆಯೇ? ನಾನು ಮಾಡಿದ ಚಿತ್ರಗಳಲ್ಲಿ 15 ನಿರ್ದೇಶಕರು ಸಿನಿಮಾರಂಗದಿಂದ ಬಂದವರಲ್ಲ. ಸ್ಟಾರ್ ಗಳ ಮಕ್ಕಳಾಗಿದ್ದರಷ್ಟೇ ಸಾಲದು. ಚಿತ್ರರಂಗದಲ್ಲಿ ನೆಲೆಯೂರಬೇಕಾದರೆ ಪರಿಶ್ರಮ ಕೂಡ ಬೇಕಾಗುತ್ತದೆ. ಜನರು ಪ್ರತಿಭಟನೆಯನ್ನು ಸಾಮರ್ಥ್ಯದ ಮೇಲೆ ಅಳಿಯುತ್ತಾರೆಯೇ ಹೊರತು ಸ್ಟಾರ್ ಕುಟುಂಬದವರು ಎಂಬ ನಂಬಿಕೆಯಿಂದಲ್ಲ. 
ಕಂಗನಾ ಆಡಿರುವ ಮಾತುಗಳ ಬಗ್ಗೆ ಅವರಿಗೆ ಸಂಪೂರ್ಣ ಅರಿವಿದೆ ಎಂದು ನಾನು ಭಾವಿಸುತ್ತೇನೆ. ಬಹುಶಃ ಅವರಿಗೆ ಸ್ವಜನಪಕ್ಷಪಾತ ಎಂಬ ಪದದ ಅರ್ಥವೇ ಸರಿಯಾಗಿ ತಿಳಿದಿಲ್ಲ ಅನಿಸುತ್ತದೆ. ಕಂಗನಾ ಪ್ರತೀ ಬಾರಿ ಇಂಡಸ್ಟ್ರಿ ಸರಿ ಇಲ್ಲ. ಮಹಿಳೆಯಾದ ಕಾರಣ ನನ್ನನ್ನು ಇಲ್ಲಿ ಸರಿಯಾಗಿ ನಡೆಸಿಕೊಡುತ್ತಿಲ್ಲ ಎಂದೆಲ್ಲ ಯಾವಾಗಲೂ ಹೇಳುತ್ತಿರುತ್ತಾರೆ. ಪ್ರತೀಯೊಂದಕ್ಕೂ ಒಂದು ಮಿತಿ ಎಂಬುದಿರುತ್ತದೆ. ಇಂಡಸ್ಟ್ರಿ ಅಷ್ಟೊಂದು ಕೆಟ್ಟದಾಗಿದ್ದರೆ. ಕಂಗನಾ ಇನ್ನೂ ಇಲ್ಲಿ ಯಾಕಿರಬೇಕು? ಇಂಡಸ್ಟ್ರಿ ಬಿಟ್ಟುಬಡಲಿ ಎಂದು ಹೇಳಿದ್ದರು. 
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ನನ್ನನ್ನು ಬಾಲಿವುಡ್ ಬಿಟ್ಟು ಹೋಗು ಎಂದು ಹೇಳಲು ಕರಣ್ ಯಾರೂ ಅಲ್ಲ, ನಾನು ಎಲ್ಲಿಯೂ ಹೋಗುವುದಿಲ್ಲ. ಜೀವನದ ಹೋರಾಟದಲ್ಲಿ ಗೆಲುವು ಸಾಧಿಸಲು ಎಲ್ಲಾ ರೀತಿಯ ಪಟ್ಟುಗಳನ್ನು ಬಳಸಿದ್ದೇನೆ. ಸಂತ್ರಸ್ತೆ, ಓರ್ವ ಹೆಣ್ಣು ಎಂದು ಅನುಕಂಪಗಿಟ್ಟಿಸಿಕೊಂಡಿದ್ದೇನೆ. ಇದು ನನಗೆ ಅನಿವಾರ್ಯವಾಗಿತ್ತು. ಪ್ರತಿಯೊಬ್ಬರೂ ಆಯಾ ಪರಿಸ್ಥಿತಿ ಹಾಗೂ ಮನಸ್ಥಿತಿಗೆ ತಕ್ಕಂತೆ ಹೋರಾಡುತ್ತಾರೆ. ನಾನು ಕರಣ್ ಜೋಹರ್ ವಿರುದ್ಧ ಹೋರಾಡುತ್ತಿಲ್ಲ. ದುರಾಭಿಮಾನದ ವಿರುದ್ದ ಹೋರಾಡುತ್ತಿದ್ದೇನೆ. ಕರಣ್ ಜೋಹರ್ ಈಗ ಪುಟ್ಟ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಅವರೂ ಕೂಡ ಇದನ್ನೆಲ್ಲಾ ಮಗಳಿಗೆ ಹೇಳಿಕೊಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

ಶ್ರೀಶೈಲ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ; ಕಾರಣ ನಿಗೂಢ