ನಟಿ ಕಾಜೊಲ್ 
ಬಾಲಿವುಡ್

ಅದು ಗೋ ಮಾಂಸವಲ್ಲ, ಎಮ್ಮೆಯ ಮಾಂಸ: ನಟಿ ಕಾಜೊಲ್ ಸ್ಪಷ್ಟನೆ

ತಾವು ಗೆಳೆಯರೊಡನೆ ಔತಣಕೂಟದಲ್ಲಿ ಸೇವಿಸಿದ ಖಾದ್ಯ...

ಮುಂಬೈ: ತಾವು ಗೆಳೆಯರೊಡನೆ ಔತಣಕೂಟದಲ್ಲಿ ಸೇವಿಸಿದ ಖಾದ್ಯ ಗೋಮಾಂಸವಲ್ಲ, ಎಮ್ಮೆಯ ಮಾಂಸ. ಈ ಮಾಂಸಕ್ಕೆ ನಿಷೇಧವಿಲ್ಲ. ಇದೊಂದು ಸೂಕ್ಷ್ಮವಾದ ವಿಷಯ. ಹೀಗಾಗಿ, ನಾನು ಈ ಸ್ಪಷ್ಟನೆ ನೀಡುತ್ತಿದ್ದೇನೆ. ಯಾರೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ನನ್ನ ಉದ್ದೇಶವಲ್ಲ’ ಎಂದು ನಟಿ ಕಾಜೋಲ್ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಪೋಸ್ಟ್‌ ಸ್ಪಷ್ಟನೆ ನೀಡಿದ್ದಾರೆ.
ಕಾಜೋಲ್ ಮೊನ್ನೆ ಭಾನುವಾರ ಮುಂಬೈಯಲ್ಲಿ ತಮ್ಮ ಗೆಳೆಯ ರ್ಯಾನ್ ಸ್ಟೆಫನ್ ರೆಸ್ಟೋರೆಂಟ್ ನಲ್ಲಿ ಔತಣಕೂಟಕ್ಕೆ ಹೋಗಿದ್ದರು. ಅವರ ಜೊತೆ ಬಾಲಿವುಡ್ ನ ಸೆಲೆಬ್ರಿಟಿಗಳಾದ ಮ ಲೈಕಾ ಅರೋರ ಖಾನ್, ದಿಯಾ ಮಿರ್ಜಾ ಮೊದಲಾದವರು ಭಾಗವಹಿಸಿದ್ದರು. 
ಔತಣಕೂಟದ ಮಾಂಸದ ಖಾದ್ಯದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.ಮಾಂಸದ ಖಾದ್ಯವನ್ನು ಕೋಜೋಲ್ ಅವರು ತೋರಿಸುತ್ತಾ, ಇದು ಯಾವ ಖಾದ್ಯ ಎಂದು ಹೇಳು, ಅದೇನು ಎಂದು ಎಲ್ಲರಿಗೂ ಗೊತ್ತಾಗಲಿ ಎಂದು ತಮ್ಮ ಗೆಳೆಯನಲ್ಲಿ ಕೇಳಿದ್ದರು. ಅವರ ಗೆಳೆಯ ಅದು, ‘ಗೋಮಾಂಸದ ಖಾದ್ಯ’ ಎಂದು ಹೇಳಿದಾಗ ಗೋಮಾಂಸದ ಅಡುಗೆ ಮಾಡಿದ್ದಕ್ಕೆ ನಿನ್ನ ಕೈ ಕತ್ತರಿಸುತ್ತೇನೆ ನೋಡು ಎಂದು ಕಾಜೊಲ್ ಹಾಸ್ಯ ಮಾಡುವುದು ವಿಡಿಯೊದಲ್ಲಿ ಇದೆ.
ಈ ವಿಡಿಯೊ ವೈರಲ್ ಆಯ್ತು. ಅದನ್ನು ವೀಕ್ಷಿಸಿದ ಹಲವರು ಗೋಮಾಂಸದ ವಿಚಾರದಲ್ಲಿ ಕಾಜೋಲ್‌ ಅವರ ವಿರುದ್ಧ ಟೀಕೆಯ ಮಳೆ ಸುರಿಸಿದ್ದರು. ಆದರೆ, ಈ ವಿಡಿಯೊ ವೈರಲ್‌ ಆಗಿ ತಮ್ಮ ವಿರುದ್ಧ ಟೀಕೆಗಳು ಹೆಚ್ಚಾದ ಮೇಲೆ ಕಾಜೋಲ್‌ ಆ ವಿಡಿಯೊ ಅನ್ನು ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಾರೆ. ಅಲ್ಲದೆ ಆ ವಿಡಿಯೊ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಮಹಾರಾಷ್ಟ್ರ ಹಾಗೂ ದೇಶದ ಇತರ ಭಾಗಗಳಲ್ಲಿ ಗೋಮಾಂಸಕ್ಕೆ ನಿಷೇಧ ಹೇರಲಾಗಿದ್ದು ಯಾರಾದರೂ ಅದನ್ನು ಸೇವಿಸಿದರೆ, ಖಾದ್ಯ ತಯಾರಿಸಿದರೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಸರ್ಕಾರದ ನಿಯಮವನ್ನು ಕೆಲವರು ಸ್ವಾಗತಿಸಿದರೆ ಇನ್ನು ಕೆಲವರು ಟೀಕಿಸಿದ್ದರು. ನಟ ರಿಶಿ ಕಪೂರ್ ವಿರೋಧಿಸಿದ್ದರು.
ನಟಿ ಕಾಜೊಲ್ 2015ರಲ್ಲಿ ಶಾರೂಕ್ ಖಾನ್ ಜೊತೆ ದಿಲ್ ವಾಲೆ ಚಿತ್ರದಲ್ಲಿ ನಟಿಸಿದ್ದು ಇದೀಗ ತಮಿಳಿನಲ್ಲಿ ಧನುಷ್ ಎದುರು ವಿಐಪಿ2 ಚಿತ್ರದಲ್ಲಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

Encounter: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಹತ್ಯೆ!

SCROLL FOR NEXT