ಮಾಧುರಿ ದೀಕ್ಷಿತ್ 
ಬಾಲಿವುಡ್

ಬಾಲಿವುಡ್ ಚಿರಂತನ ಸುಂದರಿ ಮಾಧುರಿಗೆ ೫೦; ಹರಿದು ಬಂದ ಶುಭಾಶಯಗಳ ಮಹಾಪೂರ

ಬಾಲಿವುಡ್ ನ ಖ್ಯಾತ ತಾರೆ ಮತ್ತು ನೃತ್ಯಗಾರ್ತಿ ಮಾಧುರಿ ದೀಕ್ಷಿತ್ ಅವರು ಸೋಮವಾರ ೫೦ನೆಯ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಿರಿಯ ನಟರಾದ ಅನಿಲ್ ಕಪೂರ್, ಜಾಕಿ ಶ್ರಾಫ್, ಜೂಹಿ ಚಾವ್ಲಾ

ಮುಂಬೈ: ಬಾಲಿವುಡ್ ನ ಖ್ಯಾತ ತಾರೆ ಮತ್ತು ನೃತ್ಯಗಾರ್ತಿ ಮಾಧುರಿ ದೀಕ್ಷಿತ್ ಅವರು ಸೋಮವಾರ ೫೦ನೆಯ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಿರಿಯ ನಟರಾದ ಅನಿಲ್ ಕಪೂರ್, ಜಾಕಿ ಶ್ರಾಫ್, ಜೂಹಿ ಚಾವ್ಲಾ ಮುಂತಾದವರು ನಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. 
ಮೇ ೧೫, ೧೯೬೭ರಲ್ಲಿ ಜನಿಸಿದ್ದ ಮಾಧುರಿ, ೧೯೮೪ ರಲ್ಲಿ 'ಅಬೋಧ್' ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ನಂತರ ಜನಪ್ರಿಯ ಸಿನೆಮಾಗಳಾದ 'ರಾಮ್ ಲಖನ್', 'ದಿಲ್', 'ಬೇಟಾ', 'ಹ್ಯಾಮ್ ಆಪ್ಕೆ ಹೈ ಕೌನ್', 'ದಿಲ್ ತೊ ಪಾಗಲ್ ಹೈ', 'ದೇವದಾಸ್' ಮುತಾಂದ ಸಿನೆಮಾಗಳಲ್ಲಿ ನಟಿಸಿ ಬಾಲಿವುಡ್ ರಾಣಿಯಾಗಿ ಮೆರೆದವರು. ನಟನೆಯಲ್ಲಷ್ಟೇ ಅಲ್ಲದೆ ತಮ್ಮ ನೃತ್ಯ ಕೌಶಲ್ಯಕ್ಕೂ ಮನೆಮಾತಾದವರು ಮಾಧುರಿ. 
ಮಾಧುರಿ ೧೯೯೯ರಲ್ಲಿ ಲಾಸ್ ಏಂಜಲೀಸ್ ವೈದ್ಯ ಶ್ರೀರಾಮ್ ಮಾಧವ್ ನೆನೆ ಅವರನ್ನು ವರಿಸಿದ್ದರು.  ಈ ದಂಪತಿಗೆ ಅರಿನ್ ಮತ್ತು ರಯಾನ್ ಎಂಬ ಇಬ್ಬರು ಪುತ್ರರಿದ್ದಾರೆ. 
ಈ ಸಂದರ್ಭದಲ್ಲಿ ಬಾಲಿವುಡ್ ತಾರೆಯರಾದ ಅನಿಲ್ ಕಪೂರ್, ಜಾಕಿ ಶ್ರಾಫ್, ಜೂಹಿ ಚಾವ್ಲಾ, ರಿತೇಶ್ ದೇಶಮುಖ್, ಅದಿತಿ ರಾವ್ ಹೈದರಿ, ಕರಣ್ ವಹಿ, ರಾಗಿಣಿ ಖನ್ನಾ, ಮನೀಶ್ ಪಾಲ್ ಮುಂತಾದವರು ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಗ್ರಾಹಕರಿಗೆ ಶಾಕ್: ಪೆಟ್ರೋಲ್, ಡೀಸೆಲ್ ದರ 5 ದಿನಗಳಲ್ಲಿ ಎರಡನೇ ಬಾರಿ ಏರಿಕೆ

Tamil Nadu: ಯಾವುದೇ ಸಮಯದಲ್ಲಿ TMK ಸರ್ಕಾರ ಪತನ, ರೆಡಿಯಾಗಿರಿ, ಡಿಎಂಕೆ ಕಾರ್ಯಕರ್ತರಿಗೆ ಸ್ಟಾಲಿನ್ ಕರೆ!

ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟ: ಕಂಜನ್ ದಾಳಿಯಿಂದ ಗಾಯಗೊಂಡಿದ್ದ 'ಮಾರ್ತಾಂಡ' ಸಾವು!

ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆಗೆ ತುಮಕೂರು ಸಜ್ಜು!

ಗಲ್ಫ್ ರಾಷ್ಟ್ರಗಳ ಮನವಿ: ಇರಾನ್ ಮೇಲಿನ ದಾಳಿ ಮುಂದೂಡಿದ ಡೊನಾಲ್ಡ್ ಟ್ರಂಪ್

SCROLL FOR NEXT