ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಜೀವನಾಧಾರಿತ ಚಿತ್ರ ಸಚಿನ್ ದಿ ಬಿಲಿಯನ್ ಡ್ರೀಮ್ಸ್ ಚಿತ್ರ ನಾಲ್ಕನೇ ದಿನಕ್ಕೆ 32 ಕೋಟಿ ಗಳಿಕೆ ಮಾಡಿದೆ.
ಕಳೆದ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗಿರುವ ಸಚಿನ್ ದಿ ಬಿಲಿಯನ್ ಡ್ರೀಮ್ಸ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಬಿಡುಗಡೆಯಾದ ನಾಲ್ಕನೇ ದಿನಕ್ಕೆ ಎಲ್ಲಾ ಭಾಷೆಯಲ್ಲೂ 32.25 ಕೋಟಿ ರುಪಾಯಿ ಗಳಿಕೆ ಮಾಡಿದೆ.
ಬಹುನಿರೀಕ್ಷಿತ ಚಿತ್ರವಾಗಿದ್ದ ಸಚಿನ್ ಜೀವನಾಧಾರಿತ ಚಿತ್ರ ಮೊದಲ ದಿನ 8.40 ಕೋಟಿ, ಎರಡನೇ ದಿನ 9.20, ಮೂರನೇ ದಿನ 10.25 ಮತ್ತು ನಾಲ್ಕನೇ ದಿನಕ್ಕೆ 4.20 ಕೋಟಿ ಗಳಿಕೆ ಮಾಡಿದ್ದು ಒಟ್ಟಾರೆ 32.25 ಕೋಟಿ ಗಳಿಸಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜೀವನಾಧಾರಿತ ಚಿತ್ರ ವಿಕೇಂಡ್ ನಲ್ಲಿ 66 ಕೋಟಿ ರುಪಾಯಿ ಗಳಿಕೆ ಮಾಡಿತ್ತು. ಆದರೆ ಸಚಿನ್ ಜೀವನಾಧಾರಿತ ಚಿತ್ರ 28 ಕೋಟಿ ಗಳಿಕೆ ಮಾಡಿದೆ.