ಬಾಲಿವುಡ್

ಪದ್ಮಾವತಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಸಿಬಿಎಫ್ ಸಿ ನಕಾರ, ತಾಂತ್ರಿಕ ಕಾರಣ ನೀಡಿದ ಮಂಡಳಿ

Srinivas Rao BV
ನವದೆಹಲಿ: ತೀವ್ರ ಚರ್ಚೆಗೆ ಗ್ರಾಸವಾಗಿ, ಕುತೂಹಲ ಮೂಡಿಸಿರುವ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ದೀಪಿಕಾ ಪಡುಕೋಣೆ ನಟನೆಯ ಪದ್ಮಾವತಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ ಸಿ) ನಿರಾಕರಿಸಿದೆ. 
ಸಿಬಿಎಫ್ ಸಿ ಚಿತ್ರವನ್ನು ಪ್ರಮಾಣಿಕರಿಸಲು ತಾಂತ್ರಿಕ ಕಾರಣಗಳನ್ನು ನೀಡಿದ್ದು, ಪ್ರಮಾಣಪತ್ರಕ್ಕೆ ಅಡ್ಡಿಯಾಗಿರುವ ಕೆಲವು ತಾಂತ್ರಿಕ ಅಂಶಗಳನ್ನು ಸರಿಪಡಿಸಿದ ನಂತರ ನಿಯಮಗಳ ಪ್ರಕಾರ ಚಿತ್ರವನ್ನು ಪರಿಶೀಲಿಸಲಾಗುವುದು ಎಂದು ಮಂಡಳಿಯ ಮೂಲಗಳು ತಿಳಿಸಿವೆ. 
ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಹಲವು ಸಂಘಟನೆಗಳು ಆರೋಪಿಸಿವೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಬಿಡುಗಡೆಯ ದಿನಾಂಕ ಡಿ.1 ಕ್ಕೆ ನಿಗದಿಯಾಗಿದೆ. 
SCROLL FOR NEXT