ನವದೆಹಲಿ: ಸಾಕಷ್ಟು ವಿವಾದಕ್ಕೀಡಾಗಿದ್ದ 'ಪದ್ಮಾವತಿ' ಚಿತ್ರಕ್ಕೆ ಬಿಜೆಪಿ ಹಿರಿಯ ಮುಖಂಡ ಅಡ್ವಾಣಿ ಬೆಂಬಲ ಸೂಚಿಸಿದ್ದಾರೆ.
"ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂದಳಿ (ಸಿಬಿಎಫ್ ಸಿ) ತನ್ನ ಕೆಲಸವನ್ನು ಮಾಡಲಿ. ನಿಮಾ ವಿಚಾರವಾಗಿ ಈಗಾಗಲೆ ಬಹಳಷ್ಟು ಮಂದಿ ಬೆಂಬಲಿಸಿದ್ದಾರೆ.ಇನ್ನು ಸಂಸದೀಯ ಸಮಿತಿ ಇದರಲ್ಲಿ ಮೂಗು ತೂರಿಸುವ ಅಗತ್ಯ ಇಲ್ಲ" ಎಂದಿದ್ದಾರೆ.
'ಪದ್ಮಾವತಿ' ಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಚಿತ್ರದ ಕುರಿತಂತೆ ನಿನ್ನೆಯಷ್ಟೇ ಸಂಸದೀಯ ಮಂಡಳಿ ಎದುರು ವಿವರ ನೀಡಿದ್ದರು. ಸೆನ್ಸಾರ್ ಮಂಡಳಿ ಮುಖ್ಯಸ್ಥ ಪ್ರಸೂನ್ ಜೋಷಿ ಸಹ ಸಮಿತಿ ಎದುರು ಹಾಜರಾಗಿದ್ದು ಸಂಸದೀಯ ಸಮಿತಿಯ ನೇತೃತ್ವವನ್ನು ಅನುರಾಗ್ ಠಾಕೂರ್ ವಹಿಸಿದ್ದರು. ಸಮಿತಿಯು ಚಿತ್ರ ನಿರ್ದೇಶಕರಿಗೆ ಡಿಸೆಂಬರ್ 14ರ ಒಳಗೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ಹೇಳಿದೆ.