ಬಾಲಿವುಡ್ ನಟ ಅನುಪಮ್ ಖೇರ್ 
ಬಾಲಿವುಡ್

ಎಫ್ ಟಿಐಐಯ ನೂತನ ಅಧ್ಯಕ್ಷರಾಗಿ ಅನುಪಮ್ ಖೇರ್ ನೇಮಕ

ಭಾರತದ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(ಎಫ್ ಟಿಐಐ)ಯ ನೂತನ ಅಧ್ಯಕ್ಷರಾಗಿ ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ....

ನವದೆಹಲಿ: ಭಾರತದ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(ಎಫ್ ಟಿಐಐ)ಯ ನೂತನ ಅಧ್ಯಕ್ಷರಾಗಿ ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ನೇಮಕಗೊಂಡಿದ್ದಾರೆ. 
ದೂರದರ್ಶನದ ಮಾಜಿ ನಟ ರಾಜೇಂದ್ರ ಚೌಹಾಣ್ ಅವರ ಸ್ಥಾನವನ್ನು ಅನುಪಮ್ ಖೇರ್ ಅಲಂಕರಿಸಿದ್ದಾರೆ. 62 ವರ್ಷದ ನಟ ಅನಪಮ್ ಖೇರ್ 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದು ರಂಗಭೂಮಿಯಲ್ಲಿಯೂ ಉತ್ತಮ ಹೆಸರು ಗಳಿಸಿದ್ದಾರೆ.
2004ರಲ್ಲಿ ಪದ್ಮಶ್ರೀ,2016ರಲ್ಲಿ ಪದ್ಮ ಭೂಷಣ ಪ್ರಶಸ್ತಿಗಳು ಖೇರ್ ಗೆ ಸಂದಿವೆ. ಕೇಂಜ್ರ ಚಲನಚಿತ್ರ ಪ್ರಮಾಣ ಮಂಡಳಿ ಮತ್ತು ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರು.

ಎಫ್ ಟಿಐಐಯ ಅಧ್ಯಕ್ಷರಾಗಿ ಚೌಹಾಣ್ ಅವರಿದ್ದಾಗ ವಿವಾದವಾಗಿದ್ದವು. ವಿದ್ಯಾರ್ಥಿಗಳು ಸುಮಾರು 140 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಚೌಹಾಣ್ ಅವರ ನೇಮಕಾತಿ ರಾಜಕೀಯ ಪ್ರೇರಿತವಾಗಿದ್ದು ಅವರು ಆ ಹುದ್ದೆಗೆ ಯೋಗ್ಯ ವ್ಯಕ್ತಿಯಲ್ಲ ಎಂದು ಆರೋಪಿಸಿದ್ದರು.

ಖೇರ್ ಅವರ ನೇಮಕಕ್ಕೆ ಬಾಲಿವುಡ್ ನ ಹಲವರು ಶುಭಾಶಯ ತಿಳಿಸಿದ್ದಾರೆ. ಅವರ ಪತ್ನಿ ಬಿಜೆಪಿ ಸಂಸದೆ ಕಿರ್ರನ್ ಖೇರ್ ಪ್ರತಿಕ್ರಿಯೆ ನೀಡಿ, ಎಫ್ ಟಿಐಐಯ ಅಧ್ಯಕ್ಷ ಸ್ಥಾನ ಸವಾಲಾಗಿದೆ. ಆದರೆ ತಮ್ಮ ಪತಿಗೆ ವಿದ್ಯಾರ್ಥಿಗಳ ಜೊತೆಗೂಡಿ ಕೆಲಸ ಮಾಡುವುದು ಇಷ್ಟದ ವಿಷಯ. ಅವರು ಉತ್ತಮ ಶಿಕ್ಷಕರು ಮತ್ತು ಪ್ರತಿಭೆಯುಳ್ಳ ವ್ಯಕ್ತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ