ಬಾಲಿವುಡ್

ಪಾಲಿ ಹಿಲ್ ಆಸ್ತಿ ವಿವಾದ: ಸುಪ್ರೀಂ ಕೋರ್ಟ್ ನಲ್ಲಿ ಬಾಲಿವುಡ್ ನಟ ದಿಲೀಪ್ ಕುಮಾರ್ ಗೆ ಜಯ

Srinivasamurthy VN
ಮುಂಬೈ: ದಶಕಗಳ ಹಿಂದಿನ ಪಾಲಿ ಹಿಲ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ಸುಪ್ರೀಂ ಕೋರ್ಟ್ ಬಾಲಿವುಡ್ ದಿಗ್ಗಜ ನಟ ದಿಲೀಪ್ ಕುಮಾರ್ ಅವರ ಪರ ತೀರ್ಪು ನೀಡಿದ್ದು, ಪಾಲಿ ಹಿಲ್ ಆಸ್ತಿಯ ಒಡೆತನವನ್ನು ದಿಲೀಪ್  ಕುಮಾರ್ ಕುಟುಂಬಕ್ಕೆ ನೀಡಿದೆ.
ಈ ಬಗ್ಗೆ ಸ್ವತಃ ದಿಲೀಪ್ ಕುಮಾರ್ ಅವರ ಪತ್ನಿ ಸಾಯಿರಾ ಬಾನು ಅವರು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದು, ಪಾಲಿ ಹಿಲ್ ಅಸ್ತಿ ದಿಲೀಪ್ ಕುಮಾರ್ ಅವರಿಗೆ ಸೇರಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಸಾಯಿರಾಬಾನು ಅವರು  ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದು, ಇದರಲ್ಲಿ ಪಾಲಿ ಹಿಲ್ ಅಸ್ತಿ ಯೂಸುಫ್ ಖಾನ್ ಅಲಿಯಾಸ್ ದಿಲೀಪ್ ಕುಮಾರ್ ಅವರಿಗೆ ಸೇರಿದ್ದು, ಈ ಆಸ್ತಿಯನ್ನು ಬ್ಲಾಕ್ ರಾಕ್ ಡೆವಲಪರ್ಸ್ ಸಂಸ್ಥೆ ಡೆವಲಪ್ ಮಾಡಿದೆ ಎಂದು  ನಾಮಫಲಕದಲ್ಲಿ ಬರೆಯಲಾಗಿದೆ. ಅಂತೆಯೇ ಸಾಯಿರಾ ಬಾನು ಅವರು ಪಾಲಿ ಹಿಲ್ ಆಸ್ತಿಯ ಕೀಯನ್ನು ಹಿಡಿದು ಚಿತ್ರಕ್ಕೆ ಫೋಸ್ ನೀಡಿದ್ದಾರೆ.

ಇನ್ನು ದಶಕಗಳ ಹಿಂದಿನ ಹಳೆಯ ಪ್ರಕರಣವಾದ ಪಾಲಿ ಹಿಲ್ ಮಾಲೀಕತ್ವ ವಿವಾದ ಸಂಬಂಧ ಕಳೆದ ಸೆಪ್ಟೆಂಬರ್ 30ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ತೀರ್ಪಿನಲ್ಲಿ ಪಾಲಿ ಹಿಲ್ ಆಸ್ತಿ ನಟ ದಿಲೀಪ್ ಕುಮಾರ್ ಅವರಿಗೆ  ಸೇರಿದ್ದು ಎಂದು ಹೇಳಿದೆ. ಪಾಲಿ ಹಿಲ್ ಪ್ರಾಪರ್ಟಿಯನ್ನು ಡೆವಲಪ್ ಮಾಡಲು ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ ಪ್ರಜಿತಾ ಡೆವಲಪರ್ಸ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದಂತೆ ಸುಮಾರು 2412  ಸ್ಕ್ವೇರ್ ಯಾರ್ಡ್ಸ್ ಭೂಮಿಯನ್ನು ಡೆವಲಪ್ ಮಾಡಿತ್ತು. ಆದರೆ ಇದಕ್ಕಾಗಿ ಒಪ್ಪಂದದಂತೆ ನಟನ ಕುಟುಂಬ ಹಣ ಪಾವತಿ ಮಾಡಿರಲಿಲ್ಲ. ಹೀಗಾಗಿ ಪ್ರಜಿತಾ ಸಂಸ್ಥೆ ಪಾಲಿ ಹಿಲ್ ಆಸ್ತಿಯನ್ನು ವಶಕ್ಕೆ ಪಡೆದಿತ್ತು.

ಈ ಸಂಬಂದ ದಶಕಗಳಿಂದಲೂ ವಿಚಾರಣೆ ನಡೆದಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆ ಚಲಮೇಶ್ವರ ಅವರು, ಪಾಲಿ ಹಿಲ್ ಆಸ್ತಿಯನ್ನು ಡೆವಲಪ್ ಮಾಡಿದ ಪ್ರಜೀತಾ ರಿಯಲ್ ಎಸ್ಟೇಟ್ ಸಂಸ್ಥೆಗೆ 20 ಕೋಟಿ  ರು.ಗಳನ್ನು ನೀಡುವಂತೆ ದಿಲೀಪ್ ಕುಮಾರ್ ಕುಟುಂಬಕ್ಕೆ ಆದೇಶಿಸಿದೆ. ಅಂತೆಯೇ ಪಾಲಿ ಹಿಲ್ ಆಸ್ತಿ ದಿಲೀಪ್ ಕುಮಾರ್ ಅವರಿಗೆ ಸೇರಿದ್ದು ಎಂದು ಆದೇಶ ನೀಡಿದ್ದಾರೆ. ಅಲ್ಲದೆ ಡಿಡಿ ಮೂಲಕ ಈ ಹಣವನ್ನು ಇನ್ನು ನಾಲ್ಕು  ವಾರಗಳಲ್ಲಿ ಸಂಸ್ಥೆಗೆ ನೀಡುವಂತೆ ಆದೇಶ ನೀಡಿದ್ದಾರೆ.
SCROLL FOR NEXT