ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ವಿವಾಹ ಎಲ್ಲಿ ನಡೆಯುತ್ತೆ ಎಂಬುದು ಬಹಿರಂಗಗೊಂಡಿದೆ.
ಅಕ್ಟೋಬರ್ ತಿಂಗಳಲ್ಲಿ ಪ್ರಿಯಾಂಕಾ ಚೋಪ್ರಾ-ನಿಕ್ ವಿವಾಹ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ವಿವಾಹದ ಬಗ್ಗೆ ಬಾಲಿವುಡ್ ಲೈಫ್.ಕಾಮ್ ವರದಿ ಪ್ರಕಟಿಸಿದ್ದು, ಹವಾಯಿಯಲ್ಲಿ ಪ್ರಿಯಾಂಕ-ನಿಕ್ ಜೋನಾಸ್ ವಿವಾಹ ನಡೆಯಲಿದೆ ಎಂದು ತಿಳಿದುಬಂದಿದೆ. ಛಾಯಾಗ್ರಾಹಕ ಪತ್ರಕರ್ತರಿಂದ ದೂರ ಉಳಿದು ವಿವಾಹ ಮಾಡಿಕೊಳ್ಳಲು ಚೋಪ್ರಾ-ನಿಕ್ ಬಯಸುತ್ತಿದ್ದು, ಇದಕ್ಕಾಗಿ ಈ ಜೋಡಿ ಹವಾಯಿ ಪರ್ಫೆಕ್ಟ್ ಲೊಕೇಷನ್ ಎಂಬ ನಿರ್ಧಾರಕ್ಕೆ ಬಂದಿದ್ದಾರಂತೆ.
ಇನ್ನು ನಿಕ್ ಗೆ ಹವಾಯಿ ಬಹಳ ವಿಶೇಷವಾದ ಲೊಕೇಷನ್ ಆಗಿದು, ಅವರ ಹವಾಯಿ ಫೈ0 ಹಾಗೂ ಜುಮಾನ್ಜಿ ಚಿತ್ರಗಳ ಚಿತ್ರೀಕರಣ ನಡೆದಿರುವ ಪ್ರದೇಶವಾಗಿದ್ದು ನಿಕ್ ಅವರ ಫೇವರೇಟ್ ರೆಸಾರ್ಟ್ ನಲ್ಲಿ ವಿವಾಹ ನಡೆಯಲಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.