ರಣವಿಕ್ರಮ" ಚಿತ್ರದ ನಾಯಕಿ ಅದಾ ಶರ್ಮಾ 
ಬಾಲಿವುಡ್

ತರಕಾರಿ ಮಾರಾಟಕ್ಕೆ ನಿಂತ "ರಣವಿಕ್ರಮ" ಬೆಡಗಿ! ಫೋಟೋ ವೈರಲ್

ಪವರ್ ಸ್ಟಾರ್ ಪುನೀತ್ ಅಭಿನಯದ "ರಣವಿಕ್ರಮ" ಚಿತ್ರದ ನಾಯಕಿ ಅದಾಶರ್ಮಾ ಇದೀಗ ತರಕಾರಿ ಮಾರಾಟ ಪ್ರಾರಂಭಿಸಿದ್ದಾರೆ!

ಮುಂಬೈ: ಪವರ್ ಸ್ಟಾರ್ ಪುನೀತ್ ಅಭಿನಯದ "ರಣವಿಕ್ರಮ" ಚಿತ್ರದ ನಾಯಕಿ ಅದಾ ಶರ್ಮಾ ಇದೀಗ ತರಕಾರಿ ಮಾರಾಟ ಪ್ರಾರಂಭಿಸಿದ್ದಾರೆ!  
ನಟಿ ಅದಾ ಶರ್ಮಾ ತರಕಾರಿ ಮಾರುತ್ತಿರುವ ಚಿತ್ರ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು ಬಾಲಿವುಡ್ ನಟಿ ಅದಾ ಶರ್ಮಾ ತರಕಾರಿ ಮಾರಾಟ ಮಾಡುತ್ತಿರುವುದು ಕಂಡು ಅರೆ ಕ್ಷಣ ಅವರ ಅಭಿಮಾನಿಗಳು ಸಹ ದಂಗಾಗಿದ್ದಾರೆ. ಒಮ್ಮೆಗೆ ನಟಿ ಹೀಗೇಕೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದ್ ಅವರಿಗೆ ತಿಳಿಯದೆ ಹೋಗಿದೆ. ಅಷ್ಟೇ ಅಲ್ಲ ಕೆಲವರಿಗೆ ತರಕಾರಿ ಮಾರಾಟ ಮಾಡುವ ಅದಾ ಶರ್ಮಾ ಅವರನ್ನು ಗುರುತಿಸುವುದು ಸಹ ಕಠಿಣವಾಗಿದೆ.
ಹಳೆಯ ಸೀರೆ, ಉಟ್ಟಿರುವ ನಟಿ ಹುರುಳಿಕಾಯಿ, ಬದನೆ ಸೇರಿ ತರಕಾರಿಗಳ ಮುಂದಿಟ್ಟುಕೊಂಡು ತಕ್ಕಡಿ ಜತೆಗೆ ಮಾರಾಟಕ್ಕಿಳಿದಿರುವ ಚಿತ್ರ ಎಲ್ಲೆಡೆ ಹರಿದಾಡುತಿದ್ದು ಅವರ ಭಿಮಾನಿಗಳು, ಚಿತ್ರ ರಸಿಕರಲ್ಲಿ ಅಪಾರ ಕುತೂಹಲ ಉಕ್ಕಿಸಿದೆ.
2008ರಲ್ಲಿ ‘1920’ ಚಿತ್ರದ ಮೂಲಕ ಬಾಲಿವುಡ್‍ ಚಿತ್ರರಂಗ ಪ್ರವೇಶಿಸಿದ್ದ ಅದಾ ಶರ್ಮಾ ಬಹಳ ಕಡಿಮೆ ಸಮಯದಲ್ಲಿ ಪ್ರಸಿದ್ಧ ನಟಿಯಾಗಿದ್ದರು.ಆದರೆ ನಾಲ್ಕು ವರ್ಷ ಕಾಲ ತೆರೆಯಿಂದ ಹಿಂದೆ ಸರಿದಿದ್ದ ನಟಿ  2014 ರಲ್ಲಿ ಹಸೀ ತೊ ಪಸಿ ಹಾಸ್ಯಭರಿತ ಪ್ರೇಮ ಕಥೆಯ್ತೊಡನೆ ಮತ್ತೆ ನಟನಾ ಕ್ಷೇತ್ರಕ್ಕೆ ಮರಳಿದ್ದರು. ಬಳಿಕ ದಕ್ಷಿಣ ಭಾರತೀಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಅದಾ ಇದೀಗ ಹಾಲಿವುಡ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ.
ಹೌದು ನಟಿ ಅದಾ ಶರ್ಮಾ ಶೀಘ್ರದಲ್ಲೇ ಹಾಲಿವುಡ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಅದಕ್ಕಾಗಿ ನಟಿ ಲುಕ್ಕಿಂಗ್ ಟ್ವಿಸ್ಟ್ ನೀಡಲು ತಯಾರಾಗಿದ್ದಾರೆ. ಇದಕ್ಕಾಗಿ ತರಕಾರಿ ಮಾರಾಟ ಮಾಡುವ ಮಹಿಳೆಯ ಮುಗ್ದ ಪಾತ್ರದಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಆಗಾಗ ತಮ್ಮ ನೃತ್ಯ, ವಿವಿಧ ಶೈಲಿಯ ಉಡುಪು ತೊಟ್ಟು ಫೋಟೋ ತೆಗೆಸಿಕೊಳ್ಳುವ ಅದಾ ಅದನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಡುತ್ತಿದ್ದರು. ಆದರೆ ಇದೀಗ ತಾವು ಈ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದ್ದಾರೆ. 
ನಟಿಗೆ ಆಫರ್ ದೊರೆತ ಹಾಲಿವುಡ್ ಚಿತ್ರ ಯಾವುದು? ಅದರಲ್ಲಿ ಆಕೆಯ ಪಾತ್ರವೇನು ಎನ್ನುವ್ಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT