ರಣಬೀರ್ ಕಪೂರ್, ಅಲಿಯಾ ಭಟ್ 
ಬಾಲಿವುಡ್

ರಣಬೀರ್ ಕಪೂರ್, ಅಲಿಯಾ ಭಟ್ ಜೊತೆಯಲ್ಲಿ ನ್ಯೂ ಇಯರ್ ಆಚರಿಸುವ ಸಾಧ್ಯತೆ?

ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಕಳೆದೊಂದು ವರ್ಷದಿಂದ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಂತೆ ಸದ್ಯ ನ್ಯೂಯಾರ್ಕ್ ನಲ್ಲಿರುವ ಈ ಜೋಡಿ ಅಲ್ಲಿಯೇ ನ್ಯೂ ಇಯರ್ ಆಚರಿಸುವ ಸಾಧ್ಯತೆ ಇದ್ದಂತೆ ಕಂಡುಬರುತ್ತಿದೆ

ನವದೆಹಲಿ: ರಣಬೀರ್ ಕಪೂರ್  ಹಾಗೂ ಅಲಿಯಾ ಭಟ್ ಕಳೆದೊಂದು ವರ್ಷದಿಂದ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಂತೆ ಸದ್ಯ ನ್ಯೂಯಾರ್ಕ್ ನಲ್ಲಿರುವ ಈ ಜೋಡಿ ಅಲ್ಲಿಯೇ ನ್ಯೂ ಇಯರ್ ಆಚರಿಸುವ ಸಾಧ್ಯತೆ ಇದ್ದಂತೆ ಕಂಡುಬರುತ್ತಿದೆ.

ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ  ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಾಗಿ ಈ ಜೋಡಿ  ಕಾಣಿಸಿಕೊಂಡಿದ್ದು, ಮುಂಬೈಯಲ್ಲಿ ಕೊನೆಯ ಹಂತದ  ರೋಮ್ಯಾಟಿಕ್ ದೃಶ್ಯದ ಚಿತ್ರೀಕರಣ ಮುಗಿಸಲಾಗಿದೆ. ಕಳೆದ ತಿಂಗಳು ಸಾಹಸ ದೃಶ್ಯವೊಂದನ್ನು ಚಿತ್ರೀಕರಿಸಲಾಗಿತ್ತು.

ಈ ಮಧ್ಯೆ ವಿವಾಹವಾಗುವ ಚಿಂತನೆಯಲ್ಲಿರುವ ಇವರು ಕಳೆದ ಬಾರಿಯಂತೆ ಈ ಬಾರಿಯೂ ಜೊತೆಯಾಗಿ ನ್ಯೂ ಇಯರ್ ಆಚರಿಸಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಕಳೆದ ವರ್ಷ ತೆಲ್ ಅವಿವ್ ಚಿತ್ರದ ಚಿತ್ರದ ಸಂದರ್ಭದಲ್ಲಿಯೂ ಇವರಿಬ್ಬರೂ ಜೊತೆಯಲ್ಲಿಯೇ ನ್ಯೂ ಇಯರ್ ಆಚರಣೆ ಮಾಡಿದ್ದರು.

ರಣಬೀರ್ ಪೋಷಕರಾದ ರಿಷಿ ಕಪೂರ್ ಹಾಗೂ  ನೀತು ಕಪೂರ್ ನ್ಯೂಯಾರ್ಕ್ ನಲ್ಲಿದ್ದು,  ಅವರು ಕೂಡಾ ರಣಬೀರ್ ಜೊತೆಯಲ್ಲಿಯೇ  ನ್ಯೂ ಇಯರ್ ಆಚರಣೆ ಮಾಡಲಿದ್ದಾರಂತೆ.

ಅನಾರೋಗ್ಯದಿಂದಾಗಿ ಕಳೆದ ಸೆಪ್ಟೆಂಬರ್ ತಿಂಗಳಿನಿಂದಲೂ ರಿಷಿ ಕಪೂರ್ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ರಣಬೀರ್ ಕಪೂರ್ ಕೂಡಾ ಒಂದು ತಿಂಗಳು ನ್ಯೂಯಾರ್ಕ್ ನಲ್ಲಿಯೇ ಇದ್ದರು. ನಂತರ ಕಲಾಂಕ್ ಚಿತ್ರದ ಚಿತ್ರೀಕರಣಕ್ಕಾಗಿ ರಣಬೀರ್ ಜೊತೆಯಲ್ಲಿ ಒಂದು ವಾರ ಮುಂಚಿತವಾಗಿಯೇ  ನ್ಯೂಯಾರ್ಕ್ ಗೆ ಅಲಿಯಾ ಭಟ್ ತೆರಳಿದ್ದಾರೆ ಎಂಬುದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ