ಮುಂಬೈ: ಬೆಳಿಗ್ಗೆ ಶ್ರೀದೇವಿ ಪಾರ್ಥೀವ ಶರೀರ ಸಾರ್ವಜನಿಕ ದರ್ಶನಕ್ಕೆ, ಸಂಜೆ ಅಂತ್ಯಕ್ರಿಯೆ
ಇಹ ಲೋಕ ತ್ಯಜಿಸಿರುವ ಭಾರತೀಯ ಚಿತ್ರರಂಗದ ಮೋಹಕ ತಾರೆ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ನಾಳೆ ಬೆಳಿಗ್ಗೆ 9.30ರಿಂದ...
ಮುಂಬೈ: ಇಹ ಲೋಕ ತ್ಯಜಿಸಿರುವ ಭಾರತೀಯ ಚಿತ್ರರಂಗದ ಮೋಹಕ ತಾರೆ ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ನಾಳೆ ಬೆಳಿಗ್ಗೆ 9.30ರಿಂದ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಿದ್ದು ನಂತರ 3.30ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ.
54 ವರ್ಷದ ಶ್ರೀದೇವಿ ಅವರು ಸಂಬಂಧಿಕರೊಬ್ಬರ ಮದುವೆ ಸಮಾರಂಭ ಹಿನ್ನಲೆ ದುಬೈಗೆ ತೆರಳಿದ್ದು ಶನಿವಾರ ರಾತ್ರಿ ತಾವು ತಂಗಿದ್ದ ರೂಂನ ಬಾತ್ ಟಬ್ ಗೆ ಆಕಸ್ಮಿಕವಾಗಿ ಬಿದ್ದು ವಿಧಿವಶರಾಗಿದ್ದರು. ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಸ್ವದೇಶಕ್ಕೆ ತೆಗೆದುಕೊಂಡು ಬರುತ್ತಿದ್ದು ರಾತ್ರಿ 9.30ರ ಸುಮಾರಿಗೆ ಮುಂಬೈಗೆ ಬರುವ ಸಾಧ್ಯತೆ ಇದೆ.
ಶ್ರೀದೇವಿ ಅವರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತೆಗೆದುಕೊಂಡು ಬರಲು ಕಳೆದ ಎರಡು ದಿನಗಳ ಹಿಂದೆಯೇ ರಿಲಯನ್ಸ್ ಗ್ರೂಪ್ ನ ಮುಖ್ಯಸ್ಥ ಅನಿಲ್ ಅಂಬಾನಿ ಅವರು ಖಾಸಗಿ ಜೆಟ್ ದುಬೈಗೆ ತೆರಳಿತ್ತು. 6.30ರ ಸುಮಾರಿಗೆ ಜೆಡ್ ದುಬೈನ ವಿಮಾನ ನಿಲ್ದಾಣದಿಂದ ಹೊರಡಲಿದೆ.
ಅಂಧೇರಿಯದಲ್ಲಿನ ದಿ ಸೆಲೆಬ್ರೆಷನ್ ಸ್ಪೋರ್ಟ್ ಕ್ಲಬ್ ನಲ್ಲಿ 9.30ರಿಂದ 12.30ರವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ ನಂತರ 2.00 ಗಂಟೆಯಿಂದ ಅಂತಿಮ ಮೆರವಣಿಗೆ ಮೂಲಕ ಮುಂಬೈನ ಜುಹುದ ಪವನ್ ಹನ್ಸ್ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸಂಜೆಗೆ ಹಿಂದು ಪದ್ದತಿಯಂತೆ ಅಂತ್ಯಕ್ರಿಯೆ ನಡೆಯಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.