ಮುಂಬೈ: ಪ್ರಖ್ಯಾತ ಹಿನ್ನೆಲೆ ಗಾಯಕಿ ಸುನಿಧಿ ಚೌಹಾನ್ ತಾಯಿಯಾಗಿದ್ದಾರೆ. ಮುಂಬೈನ ಆಸ್ಪತ್ರೆಯಲ್ಲಿ ಸುನಿಧಿ ಗಂಡು ಮಗುವಿಗೆ ಜನ್ಮ ನಿಡಿದ್ದಾರೆ.
ನಿನ್ನೆ (ಸೋಮವಾರ) ಸಂಜೆ 5.20ರ ಸುಮಾರಿಗೆ ಹೆರಿಗೆ ಆಗಿದೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
2012ರಲ್ಲಿ ಸಂಗೀತ ನಿರ್ದೇಶಕ ಹಿತೇಶ್ ಸೋನಿಕರೊಡನೆ ವಿವಾಹವಾಗಿದ್ದ ಸುನಿಧಿ ಅವರಿಗಿದು ಮೊದಲ ಮಗುವಾಗಿದೆ. ಸಂಗೀತ ನಿರ್ದೇಶಕ ಹಿತೇಶ್ ಕಮಲಿ, ಮೇ ಬನಿ ತೇರಿ ರಾಧಾ, ಡಾನ್ಸ್ ಪೆ ಚಾನ್ಸ್, ರೂಕಿ ರೂಕಿ ಇದೇ ಮೊದಲಾದ ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ.