ಬಾಲಿವುಡ್

ನಟ ಸಂಜಯ್ ದತ್ ವೈಭವೀಕರಣ ಬೇಡ: ಸಚಿವ ಸತ್ಯಪಾಲ್ ಸಿಂಗ್

Srinivas Rao BV
ಭೋಪಾಲ್: ಸಂಜೌ ದತ್ ನ್ನು ವೈಭವೀಕರಿಸಬಾರದು ಎಂದು ಕೇಂದ್ರ ಸಚಿವ ಹಾಗೂ ಮುಂಬೈ ನ ಮಾಜಿ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್ ಹೇಳಿದ್ದಾರೆ. 
1993 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸಂಜಯ್ ದತ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ(ಎಕೆ-56 ರೈಫಲ್) ಹೊಂದಿದ್ದ ಅಪರಾಧ ಸಾಬೀತಾಗಿತ್ತು. ಇದೇ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಸಂಜಯ್ ದತ್ 2016 ರಲ್ಲಿ ಬಿಡುಗಡೆಯಾಗಿದ್ದರು. 
"ಅಪರಾಧಿಗಳನ್ನು ವೈಭವೀಕರಿಸುವುದನ್ನು ಕಡಿಮೆ ಮಾಡಬೇಕು, ದಾವೂದ್ ಇಬ್ರಾಹಿಂ ಇರಲಿ ಬೇರೆ ಯಾರೇ ಇರಲಿ ಯಾವುದೇ ಕ್ರಿಮಿನಲ್ ಗಳನ್ನು ವೈಭವೀಕರಿಸಬಾರದು. ಅಂತೆಯೇ ಸಂಜಯ್ ದತ್ ಅವರೂ ಸಹ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಅವರನ್ನೂ ವೈಭವೀಕರಿಸುವುದು ಸರಿಯಲ್ಲ. ಸತ್ಯವನ್ನು ಸಮಾಜದ ಮುಂದಿಡಬೇಕು ಎಂದು ಸತ್ಯಪಾಲ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 
ಸಂಜಯ್ ದತ್ ಜೀವನ ಚರಿತ್ರೆಯ ಸಿನಿಮಾ ಸಂಜು ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಸಿನಿಮಾಗಳನ್ನು ಸಾಮಾನ್ಯವಾಗಿ ನೋಡುವುದಿಲ್ಲ, ಅಂತೆಯೇ ಆ ಸಿನಿಮಾವನ್ನೂ ಸಹ ನೋಡಿಲ್ಲ.  ಸಂಜಯ್ ದತ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಸಿನಿಮಾ ಬಗ್ಗೆ ನನ್ನ ಪ್ರತಿಕ್ರಿಯೆ, ಅಭಿಪ್ರಾಯದ ಬಗ್ಗೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ. 
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅವರಿಷ್ಟದಂತೆ ಸಿನಿಮಾ ಮಾಡುವ ಹಕ್ಕಿದೆ, ಆದರೆ ಅಪರಾಧಿಗಳನ್ನು ವೈಭವೀಕರಿಸಬಾರದಷ್ಟೇ ಎಂದು ಹೇಳಿದ್ದಾರೆ. ಸಂಜಯ್ ದತ್ ಅವರನ್ನು ವೈಭವೀಕರಿಸಿ ತೋರಿಸಿರುವುದಕ್ಕೆ ಸಂಜು ಸಿನಿಮಾ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ. 
SCROLL FOR NEXT