ಪುಣೆ: ಬಾಡಿಗೆ ಒಪ್ಪಂದ ನಿಯಮಾವಳಿಗಳನ್ನು ಗೌರವಿಸಲು ವಿಫಲರಾದ ಬಾಡಿಗೆದಾರರ ಮೇಲೆ ರಣಬೀರ್ ಕಪೂರ್ ಪುಣೆಯಲ್ಲಿರುವ ಅವರ ಅಪಾರ್ಟ್ ಮೆಂಟ್ ಬಾಡಿಗೆದಾರರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ಬಾಡಿಗೆದಾರರಾದ ಶೀತಲ್ ಸೂರ್ಯವಂಶಿ ಲಾಕ್-ಇನ್ ಗೆ ಮುನ್ನ ಅಪಾರ್ಟ್ ಮೆಂಟ್ ಗೆ ಹಾನಿ ಮಾಡಿದ್ದಾರೆ ಎಂದು ಆರೊಪಿಸಿರುವ ನಟ ರಣಬೀರ್ ಕಪೂರ್ ಅವರ ವಿರುದ್ಧ ಪುಣೆ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಾಡಿಗೆದಾರರೌ ಅಪಾರ್ಟ್ ಮೆಂಟ್ ಗೆ ಮಾಡಿದ ಹಾನಿಗೆ ಪ್ರತಿಯಾಗಿ. 50 ಲಕ್ಷ ಪರಿಹಾರ ನಿಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ಮಾದ್ಯಮ ವರದಿ ಹೇಳಿದೆ.
ಶೀತಲ್ ಹೇಳುವಂತೆ ಆಕೆಯನ್ನು ರಣವಿರ್ ಆಗಸ್ಟ್ 2017ಕ್ಕೆ ಮನೆ ತೊರೆಯುವಂತೆ ಹೇಳಿದ್ದರು.ಇದಾಗ ಆಕೆ ಮನೆಗೆ ಬಾಡಿಗೆಗಾಗಿ ಬಂದು ಹನ್ನೊಂದು ತಿಂಗಳಾಗಿತ್ತು.. ಆಕೆ ಅಕ್ಟೋಬರ್ 2017ಕ್ಕೆ ಮನೆ ಖಾಲಿ ಮಾಡಿದ್ದಾರೆ.ಈ ವೇಳೆ ಅವರ ಕುಟುಂಬವು "ತೀವ್ರ ಅನಾನುಕೂಲತೆ ಮತ್ತು ಕಷ್ಟಗಳನ್ನು ಅನುಭವಿಸಿತು" ಎಂದು ಹೇಳಿದ್ದಾರೆ.
ಆದರೆ ರನಬೀರ್ ಹೇಳಿಕೆಯಂತೆ ಅವರು ಬಾಡಿಗೆದಾರರಿಗೆ ಯಾವ ತೊಂದರೆ ನೀಡಿಲ್ಲ.ಬಾಡಿಗೆದಾರನು ಅವರ ಸ್ವ ಇಚ್ಚೆಯಿಂದಲೇ ಮನೆಯನ್ನು ತೆರವುಗೊಳಿಸಿದ್ದಾರೆ. ಹಾಗೆ ಖಾಲಿ ಮಾಡುವಾಗ ಅವರು ನೀಡದೆ ಹೋಗಿದ್ದ ಮೂರು ತಿಂಗಳ ಬಾಡಿಗೆಯನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಪ್ರಕರಣ ಮುಂದಿನ ವಿಚಾರಣೆ ಆಗಸ್ಟ್ 28 ರಂದು ನಡೆಯಲಿದೆ.