ಅಮೀರ್ ಖಾನ್-ಮುಕೇಶ್ ಅಂಬಾನಿ 
ಬಾಲಿವುಡ್

ಅಮೀರ್ ಖಾನ್ ನಂಬಿ 'ಮಹಾಭಾರತ' ಚಿತ್ರಕ್ಕೆ ಮುಖೇಶ್ ಅಂಬಾನಿಯಿಂದ 1000 ಕೋಟಿ ಹೂಡಿಕೆ?

ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಚಿತ್ರಗಳು ಭಾರತೀಯ ಚಿತ್ರರಂಗದ ದಾಖಲೆಗಳನ್ನು ಧೂಳಿಪಟ ಮಾಡಿದ ನಂತರ...

ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಚಿತ್ರಗಳು ಭಾರತೀಯ ಚಿತ್ರರಂಗದ ದಾಖಲೆಗಳನ್ನು ಧೂಳಿಪಟ ಮಾಡಿದ ನಂತರ ಐತಿಹಾಸಿಕ ಚಿತ್ರಗಳ ನಿರ್ಮಾಣಕ್ಕೆ ಹಲವು ನಿರ್ಮಾಪಕರು ಸಾವಿರಾರೂ ಕೋಟಿ ವೆಚ್ಚ ಮಾಡಲು ಮುಂದಾಗಿದ್ದಾರೆ. 
ಅಂತೆ ಬಾಲಿವುಡ್ ನಟ ಮಿ. ಪರ್ಫೆಕ್ಟ್ ಅಮೀರ್ ಖಾನ್ ನಿರ್ಮಿಸಲು ಉದ್ದೇಶಿಸಿರುವ ಮಹಾಭಾರತ ಚಿತ್ರಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಹೂಡಿಕೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. 
ಮಹಾಭಾರತ ಸೃಷ್ಟಿಗಾಗಿ ಅಮೀರ್ ಖಾನ್ ಕೈಗೆ 1000 ಕೋಟಿ ರುಪಾಯಿಯನ್ನು ಕೊಡಲು ಮುಖೇಶ್ ಅಂಬಾನಿ ರೆಡಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಸದ್ಯ ಅಮೀರ್ ಖಾನ್ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿ ನಟಿಸುತ್ತಿದ್ದು ಇದರ ಜೊತೆಗೆ ಮಹಾಭಾರತ ಚಿತ್ರದ ಕುರಿತಂತೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 
ಅಮೀರ್ ಖಾನ್ ನಟನೆಯ ದಂಗಲ್ ಚಿತ್ರ ಭಾರತದಲ್ಲಿ 900 ಕೋಟಿಯಷ್ಟು ಬಿಸಿನೆಸ್ ಮಾಡಿತ್ತು. ಇನ್ನು ಚೀನಾದಲ್ಲಿ ಬಿಡುಗಡೆಯಾದ ದಂಗಲ್ ಚಿತ್ರ 1200 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು ಸದ್ಯ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪೈಕಿ ದಂಗಲ್ ಮೊದಲ ಸ್ಥಾನದಲ್ಲಿದೆ. 
ಇನ್ನು ಅತ್ಯುತ್ತಮ ಕಲೆಕ್ಷನ್ ಟ್ರಾಕ್ ರೆಕಾರ್ಡ್ ಹೊಂದಿರುವ ಅಮೀರ್ ಖಾನ್ ಮಹಾಭಾರತ ಚಿತ್ರವನ್ನು ನಿರ್ಮಿಸಿದ್ದೆ ಆದರೆ ಅದು ಭಾರತೀಯ ಚಿತ್ರರಂಗದ ಪ್ರಸ್ತುತ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡುವ ಸಾಧ್ಯತೆ ಇದೆ. ಇದರಿಂದಾಗಿಯೇ ಮುಕೇಶ್ ಅಂಬಾನಿ 1000 ಕೋಟಿ ರುಪಾಯಿಯನ್ನು ಅಮೀರ್ ಖಾನ್ ಕೈಗಿಡಲು ತೀರ್ಮಾನಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಮಹಾಭಾರತ ಚಿತ್ರದಲ್ಲಿ ಅಮಿರ್ ಖಾನ್, ಮೋಹನ್ ಹಾಲ್ ಮತ್ತು ರಜನಿಕಾಂತ್ ರಂತಾ ದಿಗ್ಗಜ ನಟರು ನಟಿಸುವ ಸಾಧ್ಯತೆ ಇದೆ.
ಒಂದು ವೇಳೆ ಚಿತ್ರ ತಯಾರಾದರೇ 1000 ಕೋಟಿ ವೆಚ್ಚದಲ್ಲಿ ರೆಡಿಯಾದ ಭಾರತದ ಮೊದಲ ಚಿತ್ರ ಎಂಬ ಖ್ಯಾತಿಗೆ ಮಹಾಭಾರತ ಚಿತ್ರ ಭಾಜನವಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO ಶೃಂಗಸಭೆ 2025: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬಳಿಕ ರಷ್ಯಾ ಅಧ್ಯಕ್ಷರ ಭೇಟಿಯಾದ ಪ್ರಧಾನಿ ಮೋದಿ, ತೀವ್ರ ಕುತೂಹಲ..!

ಸದ್ದಿಲ್ಲದೆ ಹಸೆಮಣೆ ಏರಲು ಸಜ್ಜಾದ ಚಿಕ್ಕಣ್ಣ: ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ; ಹಾಸ್ಯನಟನ ಕೈ ಹಿಡಿಯೋ ಹುಡುಗಿ ಯಾರು?

ನಮ್ಮ ಸರ್ಕಾರ ಜಾತಿ ನೋಡಲ್ಲ. ಎಲ್ಲಾ ಜಾತಿಯವರ ಅಭಿವೃದ್ಧಿಯಷ್ಟೆ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ

ಚಾಮುಂಡೇಶ್ವರಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾದರೆ ‘ಚಾಮುಂಡೇಶ್ವರಿ ಚಲೋ’ ಹೋರಾಟ: ಸರ್ಕಾರಕ್ಕೆ BJP ಎಚ್ಚರಿಕೆ

ಜಾತ್ಯತೀತ-ಧರ್ಮಾತೀತ ಕರ್ನಾಟಕ ನಿರ್ಮಿಸಿದ ಕೀರ್ತಿ ಅರಸು ಸಮುದಾಯಕ್ಕೆ ಸಲ್ಲುತ್ತದೆ: DCM ಡಿಕೆ ಶಿವಕುಮಾರ್

SCROLL FOR NEXT