ಅರ್ಮಾನ್ ಕೊಹ್ಲಿ 
ಬಾಲಿವುಡ್

ನಟ ಅರ್ಮಾನ್ ಕೊಹ್ಲಿ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

ತನ್ನ ಗೆಳತಿಯ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ವಿರುದ್ಧ ದಾಖಲಾಗಿದ್ದ...

ಮುಂಬೈ: ತನ್ನ ಗೆಳತಿಯ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಶುಕ್ರವಾರ ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ.
ಕೊಹ್ಲಿ ತನ್ನ ಗೆಳತಿ, ರೂಪದರ್ಶಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಪಶ್ಚಾತ್ತಾಪ ಮತ್ತು ವಿಷಾದ ವ್ಯಕ್ತಪಡಿಸಿ ಹೈಕೋರ್ಟ್ ಇಂದು ಅಫಿಡವಿಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋರ್ಟ್ ನಟನ ವಿರುದ್ಧದ ಎಫ್ ಐಆರ್ ಅನ್ನು ರದ್ದುಗೊಳಿಸಿದೆ.
ಅರ್ಮಾನ್ ಕೊಹ್ಲಿಯ ಗೆಳತಿ ನೀರೂ ರಾಧಾವಾನ್ ಅವರು ಸಹ ಪ್ರಕರಣ ಮುಂದುವರೆಸಲು ಬಯಸದ ಹಿನ್ನೆಲೆಯಲ್ಲಿ ಸಂತ್ರಸ್ಥೆಯ ಒಪ್ಪಿಗೆ ಮೆರೆಗೆ ಕೋರ್ಟ್ ಎಫ್ ಐಆರ್ ರದ್ದುಗೊಳಿಸುತ್ತಿರುವುದಾಗಿ ಹೇಳಿದೆ.
ನೀರೂ ರಾಧಾವಾನ್ ನೀಡಿರುವ ದೂರಿನ ಆಧಾರದ ಮೇಲೆ ಕಳೆದ ಮಂಗಳವಾರ ಅರ್ಮಾನ್ ಕೊಹ್ಲಿಯನ್ನು ಬಂಧಿಸಲಾಗಿತ್ತು. 
ಮುಂಬೈನ ಸ್ಯಾಂಟಕ್ರೂಜ್ ಜಾಲೀಸ್ ಠಾಣೆಯಲ್ಲಿ ಅರ್ಮಾನ್ ಕೊಹ್ಲಿ ವಿರುದ್ಧ ಪ್ರಕರಣ ದಾಖಲಾಗಿತ್ತು. 
ಹಲ್ಲೆ ನಂತರ ಆಸ್ಪತ್ರೆಗೆ ದಾಖಲಾಗಿದ್ದ ನೀರೂ ರಾಧಾವಾನ್ ಕೊಹ್ಲಿ, ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಅರ್ಮಾನ್ ಕೊಹ್ಲಿ ಅವರು ಖ್ಯಾತ ನಿರ್ಮಾಪಕ ರಾಜ್‍ಕುಮಾರ್ ಕೊಹ್ಲಿಯ ಪುತ್ರನಾಗಿದ್ದು, ವಿರೋಧಿ ಚಿತ್ರದ ಮೂಲಕ ಬಣ್ಣ ಹಚ್ಚಿದ ಕೊಹ್ಲಿ ನಂತರ ಜಾನಿ ದುಶ್ಮನ್, ಎಲ್‍ಒಸಿ ಕಾರ್ಗಿಲ್ ಚಿತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT