ಮುಂಬೈ: ಭಾರತದ ಪುರಾತತ್ವ ಸಮೀಕ್ಷೆ(ಎಎಸ್ಐ) ಸಂರಕ್ಷಿಸುತ್ತಿರುವ 11ನೇ ಶತಮಾನದ ಶ್ರೀ ಲಿಂಗರಾಜ್ ದೇವಾಲಯದಲ್ಲಿ ಚಿತ್ರೀಕರಣ ನಡೆಸಿದ ಆರೋಪದ ಮೇಲೆ ಬಾಲಿವುಡ್ ನಟಿ ರವೀನಾ ಟಂಡನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ದೇವಾಲಯದ ಆವರಣದೊಳಗೆ ಟಂಡನ್ ಖಾಸಗಿ ಜಾಹಿರಾತು ಹಿನ್ನೆಲೆ ಸೌಂದರ್ಯ ಸಲಹೆಗಳನ್ನು ನೀಡುತ್ತಿರುವ ವಿಡಿಯೋವೊಂದನ್ನು ವ್ಯಕ್ತಿಯೋರ್ವ ಸೆರೆಹಿಡಿದಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾನೆ. ಈ ವಿಡಿಯೋ ಆಧರಿಸಿ ರವೀನಾ ಟಂಡನ್ ವಿರುದ್ಧ ಕೇಸ್ ದಾಖಲಿಸಲಾಗಿದೆ.
ನಟಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು ಪ್ರರಕಣ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಭುವನೇಶ್ವರ್ ಡಿಸಿಪಿ ಸತ್ಯಭರ್ತ್ ಭೋಯಿ ಹೇಳಿದ್ದಾರೆ.
ದೇವಸ್ಥಾನದಲ್ಲಿ ಮೊಬೈಲ್ ತೆಗೆದುಕೊಂಡು ಹೋಗಲು ದೇವಸ್ಥಾನದ ಸೇವಕರಿಗೆ ಮಾತ್ರ ಅವಕಾಶವಿದೆ. ಇನ್ನು ಭದ್ರತಾ ನಿಯಮಗಳ ಉಲ್ಲಂಘನೆಯಾಗಿರುವುದು ಇದರಿಂದ ಸ್ಪಷ್ಟವಾಗಿದೆ.
ಪ್ರಕರಣ ಕುರಿತಂತೆ ಭಾರತದ ಪುರಾತತ್ವ ಸಮೀಕ್ಷೆ(ಎಎಸ್ಐ) ಸಹ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.