ಮುಂಬೈ: ಬಾಲಿವುಡ್ ನ ಖ್ಯಾತ ಹಿರಿಯ ನಟಿ ಜೀನತ್ ಅಮಾನ್ ಅವರು ಮುಂಬೈ ಮೂದಲ ಉದ್ಯಮಿಯೊಬ್ಬರ ವಿರುದ್ಧ ಅತ್ಯಾಚಾರ ದೂರು ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿಸಂಸ್ಛೆಯೊಂದರ ವರದಿಯನ್ವಯ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ನಟಿ ಜೀನತ್ ಅಮಾನ್ ಅತ್ಯಾಚಾರ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೂಲಗಳ ಪ್ರಕಾರ ಜೀನತ್ ಅಮಾನ್ ದೂರಿನ ಮೇರೆಗೆ ಜುಹು ಪೊಲೀಸರು ಆರೋಪಿಯನ್ನು ನಿನ್ನೆ ರಾತ್ರಿ ಬಂಧಿಸಿದ್ದು, ಶೀಘ್ರ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಜೀನತ್ ಅಮಾನ್ ಅವರ ಅತ್ಯಾಚಾರ ಪ್ರಕರಣವನ್ನು ಮುಂಬೈ ಪೊಲೀಸರು ಅಪರಾಧ ವಿಭಾಗ ದಳಕ್ಕೆ ಹಸ್ತಾಂತರಿಸಿದ್ದಾರೆ.
68 ವರ್ಷದ ಜೀನತ್ ಅಮಾನ್ ಅವರು 70-80ರ ದಶಕದ ಖ್ಯಾತ ನಾಯಕ ನಟಿಯಾಗಿದ್ದರು. ಡಾನ್, ಸತ್ಯಂ ಶಿವಂ, ಸಿಖಂದರ್ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದರು.