ಲೈಂಗಿಕ ದೌರ್ಜನ್ಯ ಬಗ್ಗೆ ಮುಕ್ತವಾಗಿ ಮಾತನಾಡಿದ ಐಶ್ವರ್ಯಾ ರೈ ಬಚ್ಚನ್
ಅಮೆರಿಕಾದ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಹಾಲಿವುಡ್ ನಲ್ಲಿ ಹಾರ್ವೆ ವೈನ್ಸ್ಟನ್ ಲೈಂಗಿಕ ಹಗರಣ...
ನವದೆಹಲಿ: ಅಮೆರಿಕಾದ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಹಾಲಿವುಡ್ ನಲ್ಲಿ ಹಾರ್ವೆ ವೈನ್ಸ್ಟನ್ ಲೈಂಗಿಕ ಹಗರಣ ಬೆಳಕಿಗೆ ಬರುತ್ತಿದ್ದಂತೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ವಿಶ್ವಾದ್ಯಂತ ಚರ್ಚೆಯ ವಿಷಯವಾಗಿತ್ತು.
ಲೈಂಗಿಕ ದೌರ್ಜನ್ಯದ ವಿರುದ್ಧ ಮಿ ಟೂ ಎಂಬ ಅಭಿಯಾನವೊಂದು ಕಳೆದ ವರ್ಷದಿಂದ ಆರಂಭವಾಗಿ ಚಿತ್ರ ಜಗತ್ತನಲ್ಲೇ ಸಾಕಷ್ಟು ಚರ್ಚೆ ಉಂಟುಮಾಡಿತ್ತು. ಇದೇ ವೇದಿಕೆ ಮೂಲಕ ಅನೇಕ ನಟಿಯರು ತಮಗೆ ಚಿತ್ರರಂಗದಲ್ಲಿ ಎದುರಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.
ಇದೀಗ ವಿಶ್ವ ಸುಂದರಿ ಬಾಲಿವುಡ್ ನಟಿ ಐಶ್ವರ್ಯಾ ರೈ ಸಿಡ್ನಿಯಲ್ಲಿ ಇತ್ತೀಚೆಗೆ ಮನಬಿಚ್ಚಿ ಮಾತನಾಡಿದ್ದಾರೆ. ಯಾವುದೇ ಮಹಿಳೆಗೆ ಇಂತಹ ಅನುಭವಗಳಾದಾಗ ಅದನ್ನು ಹೇಳಿಕೊಳ್ಳಲು ಸಾಕಷ್ಟು ಮುಜುಗರ ಅನುಭವಿಸಬೇಕಾಗುತ್ತದೆ. ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಳ್ಳಲು ಇದೊಂದು ಒಳ್ಳೆಯ ವೇದಿಕೆಯಾಗಿದೆ. ಇದರಲ್ಲಿ ಯಾವುದೇ ರೀತಿಯಾದ ನಿರ್ಬಂಧಗಳು ಇಲ್ಲ. ಜೀವನದ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಮುಕ್ತ ವೇದಿಕೆ ಎಂದು ಐಶ್ವರ್ಯ ಹೇಳಿದ್ದಾರೆ.
ಸಂಡೆ ಟೆಲಿಗ್ರಾಫ್ ಗೆ ಮಾತನಾಡಿದ ಐಶ್ವರ್ಯಾ, ಮಿ ಟೂ ಅಭಿಯಾನ ಎನ್ನುವುದು ಹಲವು ವಿಷಯಗಳ ಹಂಚಿಕೆ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ. ಜನರು ಈ ಬಗ್ಗೆ ಮಾತನಾಡುತ್ತಿರುವುದು ಒಳ್ಳೆಯದು. ಜಗತ್ತಿನಲ್ಲಿ ಒಂದು ಭಾಗಕ್ಕೆ ಈ ವಿಷಯ ಸೀಮಿತವಾಗಬಾರದು. ಇದು ಖಂಡಿತಾ ಉತ್ತಮ ನಡೆ, ಮುಂದುವರಿಯಬೇಕು. ಇದು ಕೇವಲ ಮನರಂಜನಾ ಮತ್ತು ವ್ಯಾಪಾರ ಉದ್ಯಮ ಕ್ಷೇತ್ರಗಳಿಗೆ ಸೀಮಿತವಾಗಬಾರದು. ಸಮಾಜದ ಎಲ್ಲಾ ಸ್ತರಗಳಲ್ಲಿ ಮತ್ತು ಎಲ್ಲಾ ಕ್ಷೇತ್ರಗಳಿಂದ ಇದು ಚರ್ಚೆಗೆ ಬರಬೇಕು ಎಂದಿದ್ದಾರೆ ಐಶ್ವರ್ಯಾ ರೈ ಬಚ್ಚನ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.