ಸನ್ನಿ ಲಿಯೋನ್ 
ಬಾಲಿವುಡ್

ಟೀಕೆಗಳು ದೇಶಕ್ಕೆ ಸಂಬಂಧಿಸಿಲ್ಲ, ಇಡೀ ಸಮಾಜದ ಮನೋಧರ್ಮವಾಗಿದೆ:ಸನ್ನಿ ಲಿಯೋನ್

ವಯಸ್ಕರ ಸಿನಿಮಾದಿಂದ ಬಾಲಿವುಡ್ ಗೆ ಬದಲಾಗುವ ಮುನ್ನ ನಟಿ ಸನ್ನಿ ಲಿಯೋನ್ ಸಾಕಷ್ಟು ಟೀಕೆಗಳು...

ಮುಂಬೈ: ವಯಸ್ಕರ ಸಿನಿಮಾದಿಂದ ಬಾಲಿವುಡ್ ಗೆ ಬದಲಾಗುವ ಮುನ್ನ ನಟಿ ಸನ್ನಿ ಲಿಯೋನ್ ಸಾಕಷ್ಟು ಟೀಕೆಗಳು, ಆರೋಪಗಳು ಮತ್ತು ದ್ವೇಷಗಳನ್ನು ಕೇಳಿಕೊಂಡು ಬಂದಿದ್ದರು. ತಾವು ಭಾರತದಲ್ಲಿ ಇದ್ದೇನೆ ಎಂದು ಟೀಕೆ, ನಿಂದನೆಗಳು ಕೇಳಿಬರಲಿಲ್ಲ, ಬದಲಾಗಿ ಅದು ಇಡೀ ಸಮಾಜದ ಮನೋಧರ್ಮದಿಂದಾಗಿ ಆಗಿದೆ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

ಕರೆಂಜಿತ್ ಕೌರ್-ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ಜೀವನಚರಿತ್ರಯಲ್ಲಿ ಸನ್ನಿ ಲಿಯೋನ್ ರ ಜೀವನ ಚರಿತ್ರೆಯ ಬಗ್ಗೆ ಅನಾವರಣಗೊಳ್ಳಲಿದೆ. ನಾನು ಭಾರತಕ್ಕೆ ಬರಲು ನಿರ್ಧರಿಸಿದಾಗ ನನ್ನ ಬಗ್ಗೆ ಜನರು ಟೀಕಿಸಲು ಆರಂಭಿಸಿದರು ಎಂದು ಹಲವು ಜನರು ತಪ್ಪು ಗ್ರಹಿಕೆ ಮಾಡಿದ್ದಾರೆ. ಆದರೆ ಅದು ನಿಜವಲ್ಲ. ನಾನು ಸುಮಾರು 21 ವರ್ಷದವಳಾದಾಗ ನನ್ನ ಬಗ್ಗೆ ಟೀಕೆ, ನಿಂದನೆ, ದ್ವೇಷ ಕೇಳಲು ಆರಂಭಿಸಿತು ಎನ್ನುತ್ತಾರೆ.

ಹೀಗಾಗಿ ಇದು ದೇಶವನ್ನು ಅವಲಂಬಿಸಿಲ್ಲ, ಬದಲಾಗಿ ಇಡೀ ಸಮಾಜದ ಜನರ ಮನೋಧರ್ಮವನ್ನು ಅವಲಂಬಿಸಿದೆ. ಅಂದು ನಾನು ಮೊದಲ ಬಾರಿಗೆ ಸಮಾಜದಿಂದ ದ್ವೇಷವನ್ನು ಎದುರಿಸಿದೆ ಎಂದು ಸನ್ನಿ ಲಿಯೋನ್ ಸುದ್ದಿ ಸಂಸ್ಥೆಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕರೆಂಜಿತ್ ಕೌರ್ ಎಂಬ ಶೋ ಸದ್ಯದಲ್ಲಿಯೇ ಒಟಿಟಿ ಪ್ಲಾಟ್ ಫಾರ್ಮ್ ಝೀ5ಯಲ್ಲಿ ಪ್ರಸಾರವಾಗಲಿದ್ದು  ಸನ್ನಿ ಲಿಯೋನ್ ಜೀವನ ಪಯಣವನ್ನು ತೋರಿಸಲಿದೆ. ಕೆನಡಾದಲ್ಲಿ ಸಿಖ್ ಕುಟುಂಬದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಕರೆಂಜಿತ್ ಕೌರ್ ಎಂಬ ಹೆಸರಿನಲ್ಲಿ ಸನ್ನಿ ಲಿಯೋನ್ ಜನಿಸಿದ್ದರು.

ಹಲವು ಕುಟುಂಬಗಳಲ್ಲಿರುವಂತೆ ನಮ್ಮ ಕುಟುಂಬದಲ್ಲಿ ಕೂಡ ಕೆಲವು ಸಮಸ್ಯೆಗಳಿವೆ. ನಮ್ಮ ಜೀವನದಲ್ಲಿ ಕೂಡ ಪ್ರೀತಿ, ದ್ವೇಷ, ಭಾವನೆಗಳಿರುತ್ತವೆ. ನಮ್ಮ ಪೋಷಕರು ನನ್ನನ್ನು ಮತ್ತು ನನ್ನ ಸೋದರನನ್ನು ಎಲ್ಲಾ ಋಣ ಅಂಶಗಳಿಂದ ರಕ್ಷಿಸಿದರು. ಆದರೆ ಪೋಷಕರು ಇಚ್ಛಿಸಿದ್ದಕ್ಕಿಂತ ವಿರುದ್ಧವಾಗಿ 21 ವರ್ಷಕ್ಕೆ ನಾನು ಜೀವನದಲ್ಲಿ ವಿರುದ್ಧ ದಿಕ್ಕಿನಲ್ಲಿ ಹೋದೆ. ಆದರೆ ನನ್ನ ಜೀವನದಲ್ಲಿ ಬಂದದ್ದನ್ನು ನಾನು ಪ್ರೀತಿಸುತ್ತೇನೆ, ಎಲ್ಲವೂ ಒಂದು ಕಾರಣಕ್ಕಾಗಿ ಆಗಿದೆ ಎಂದು ಭಾವಿಸುತ್ತೇನೆ, ನನಗೆ ಅದರಲ್ಲಿ ವಿಷಾದವಿಲ್ಲ ಎನ್ನುತ್ತಾರೆ.
 
ಬಿಗ್ ಬಾಸ್ ಮೂಲಕ ಬಾಲಿವುಡ್ ಗೆ ಬಂದ ಸನ್ನಿ ಲಿಯೋನ್ ನಂತರ ಜಿಸ್ಮ್ 2 ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT