ಬಾಲಿವುಡ್ ನಟ ಖ್ಯಾತ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಅನೇಕ ಬಾಲಿವುಡ್ ನಟಿಯರು ಮೀಟೂ ಆರೋಪ ಮಾಡಿದ್ದು ಇದೀಗ ಲಿಪ್ ಸ್ಟಿಕ್ ಅಂಡರ್ ಬುರ್ಖಾ ಚಿತ್ರದ ನಟಿ ಅಹಾನಾ ಕುಮ್ರಾ ಸಹ ಸಾಜಿದ್ ವಿರುದ್ದ ಆರೋಪ ಮಾಡಿದ್ದಾರೆ.
ಸಾಜಿದ್ ತಮ್ಮನ್ನು ಮನೆಗೆ ಕರೆದು ಬೇರಿ ರೀತಿಯಲ್ಲಿ ವರ್ತಿಸಿದ್ದರು. ಅವರ ಮನೆಯಲ್ಲಿ ಕತ್ತಲೆ ಕೋಣೆಗೆ ಕರೆದುಕೊಂಡು ಹೋಗಿದ್ದರು. ನಾನು ಲೈಟ್ ಹಾಕಿ ಎಂದು ಹೇಳಿದ ಮೇಲೆ ಅವರು ಸ್ವಿಚ್ ಹಾಕಿದ್ದರು. ಅವರ ವರ್ತನೆಯಲ್ಲಿ ಏನೋ ಬದಲಾವಣೆ ಆಗಿದೆ ಅಂತ ನನಗೆ ಅನಿಸಿತ್ತು. ಹಾಗಾಗಿ ನನ್ನ ತಾಯಿ ಪೊಲೀಸ್ ಅಧಿಕಾರಿ ಎನ್ನುವ ಸೂಚನೆ ನೀಡಿದ್ದೆ ಎಂದು ಸಂದರ್ಶನವೊಂದರಲ್ಲಿ ಅಹಾನಾ ಕುಮ್ರಾ ಹೇಳಿದ್ದಾರೆ.
ಇದರ ನಡುವೆ ಅವರು ನನ್ನನ್ನು ಕೆಲ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದೇ ವೇಳೆ 100 ಕೋಟಿ ರುಪಾಯಿ ಕೊಡುತ್ತೇನೆ ಎಂದರೆ ನಾಯಿಯ ಜತೆ ಲೈಂಗಿಕ ಕ್ರಿಯೆ ನಡೆಸಲು ನೀವು ಒಪ್ಪುತ್ತೀಯಾ ಎಂದು ನನ್ನನ್ನು ಪ್ರಶ್ನಿಸಿದ್ದರು. ಆದರೆ ಅವರು ಅಲ್ಲಿ ನನ್ನನ್ನು ಮುಟ್ಟಿಲ್ಲ ಎಂದು ಹೇಳಿದ್ದಾರೆ.