ನವದೆಹಲಿ: ಸೂಪರ್ ಸ್ಚಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ 2.0 ಚಿತ್ರಕ್ಕೆ ರಿಲೀಸ್ ಗೂ ಮೊದಲೇ ಕಂಟಕ ಎದುರಾಗಿದ್ದು, ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ (ಸಿಒಎಐ) ಸಂಸ್ಥೆ ದೂರು ದಾಖಲಿಸಿದೆ.
2.0 ಸಿನಿಮಾದಲ್ಲಿ ವೈಜ್ಞಾನಿಕ ವಿರೋಧಿ ಅಂಶಗಳಿವೆ ಎಂದು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಸಂಸ್ಥೆ ತನ್ನ ದೂರಿನಲ್ಲಿ ಆರೋಪಿಸಿದ್ದು, ಈ ಸಂಬಂಧ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಹಾಗೂ ಸೆನ್ಸಾರ್ ಬೋರ್ಡ್ಗೆ ಈ ಸಂಬಂಧ ಲಿಖಿತ ದೂರನ್ನು ನೀಡಲಾಗಿದೆ. ಚಿತ್ರದಲ್ಲಿ ಮೊಬೈಲ್ ಬಳಕೆ ಬಗ್ಗೆ ಎಚ್ಚರಿಕೆ ನೀಡಿದ್ದು, ಇದು ವೈಜ್ಞಾನಿಕ ವಿರೋಧಿ ಅಂಶಗಳನ್ನು ಒಳಗೊಂಡಿದೆ ಎಂದು ದೂರು ದಾಖಲಿಸಲಾಗಿದೆ.
ಈ ಜಗತ್ತು ಕೇವಲ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ-ಪಕ್ಷಿಗಳು ಜೀವಿಸೋಕೆ ಅಂತಾ ಹೇಳಲು ಹೊರಟಿದ್ದಾರೆ. ಆದರೆ, ಈ ವೇಳೆ ಮೊಬೈಲ್ ಹಾಗೂ ಅದರ ಟವರ್ ಗಳಿಂದ ಪಕ್ಷಿಗಳಿಗೆ ಹಾನಿಯಾಗುತ್ತೆ ಅಂತಾನೂ ಬಿಂಬಿಸಲಾಗಿದೆ. ಇದು ವಿಜ್ಞಾನ ವಿರೋಧಿ ಮನೋಭಾವವನ್ನು ತೋರುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಚಿತ್ರದ ಟೀಸರ್, ಟ್ರೈಲರ್, ಪ್ರಮೋಷನಲ್ ವಿಡಿಯೋಗಳು ಕೂಡಾ ಇದನ್ನೇ ಉತ್ತೇಜಿಸುವಂತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಇದೇ ಕಾರಣಕ್ಕೆ ಚಿತ್ರದ ಪ್ರದರ್ಶವನ್ನು ತಡೆಹಿಡಿಯಬೇಕು ಎಂದು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಮನವಿ ಮಾಡಿಕೊಂಡಿದೆ.