ಅದು 2008ರ ವರ್ಷ. ನಾನು ಆಗಷ್ಟೇ ಪತ್ರಿಕೋದ್ಯಮ ಪದವಿ ಪಡೆದು ನಗರದ ಸುದ್ದಿಪತ್ರಿಕೆಯೊಂದಕ್ಕೆ ಕಲೆ ಮತ್ತು ಸಂಸ್ಕೃತಿ ಹಿನ್ನೆಲೆಯ ವರದಿಗಳನ್ನು ನೀಡುವ ಕೆಲಸ ಪ್ರಾರಂಭಿಸಿದ್ದೆ. ಅದೇ ವರ್ಷ ನಂದಿತಾ ದಾಸ್ ಸಹ "ಫಿರಾಕ್"(ಗುಜರಾತಿನಲ್ಲಿ ಘಟಿಸಿದ 2002ರ ಕೋಮು ಗಲಭೆಯಾಧಾರಿತ ಕಥೆ) ಎನ್ನುವ ಕಿರುಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದಿದ್ದರು.
ಹತ್ತು ವರ್ಷಗಳ ನ್ಬಳಿಕವೂ ನಾನು ದಾಸ್ ಹೇಳಿರುವ ಮಾತುಗಳನ್ನು ನೆನಪಿಸಿಕೊಳ್ಳಬಲ್ಲೆ , ಅವರು ಮಾನವ ನಡೆಸುವ ಹಿಂಸಾಚಾರ, ಹಾಗೂ ಆತನ ದ್ವೇಷ ಅತಿ ಕೆಟ್ಟದು ಎನ್ನುತ್ತಿದ್ದರು.ಅಲ್ಲದೆ ಚಿತ್ರಜಗತ್ತಿನಲ್ಲಿ ಮಹಿಳಾ ದೃಷ್ಟಿಕೋನದ ಅಗತ್ಯದ ಕುರಿತು ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಹತ್ತು ವರ್ಷಗಳ ಹಿಂದಿನ ನಮ್ಮ ಸಂದರ್ಶನದಲ್ಲಿ ಮಹಿಳೆಯರನ್ನು ದ್ರ್ಬಲಗೊಳಿಸಿರುವ ವಿಷಯಗಳು ಹಾದು ಹೋಗಿದ್ದವು. ಅಲ್ಲದೆ ಮಹಿಳೆಯರ ಪರ ದೃಷ್ಟಿಕೋನವುಳ್ಳ ಚಿತ್ರಗಳನ್ನು ತೆರೆ ಮೇಲೆ ಮೂಡಿಸುವ ಬಗೆಯ ಕುರಿತು ಸಹ ಮಾತುಗಳು ಬಂದಿದ್ದವು. ಪುರುಷರು ರಚಿಸುವ ಮಹಿಳಾ ಪರ ಚಿತ್ರಗಳು ಅವರ ದೃಷ್ಟಿಕೋನಗಳಿಗಷ್ಟೇ ಸೀಮಿತವಾಗಿರುತ್ತದೆ. ಅದು ಮಹಿಳೆಯರ ನೇರ ದೃಷ್ಟಿಕೋನನ್ನೆಂದೂ ಪ್ರತಿನಿಧಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಒಂದು ದಶಕದ ಬಳಿಕ ಮತ್ತೆ ನಂದಿತಾ ದಾಸ್ ಪುನರಾಗಮನವಾಗಿದೆ.ಅವರ ಈಗಿನ ಚಿತ್ರದ ಹೃದಯಭಾಗವೇ ಓರ್ವ ನಿಜವಾದ ಪುರುಷನು ಆವರಿಸಿಕೊಂಡಿದ್ದಾನೆ.ಕಥೆಗಾರ, ಲೇಖಕ ಮಂಟೋ(ವಾಝುದ್ದೀನ್ ಸಿದ್ದಿಕಿ) ಆನ್ ಸ್ಕ್ರೀನ್ ನಲ್ಲಿ ಹೇಳಿದಂತೆ , "ನಿಮ್ಮ ಕಥೆಗಳು ಯಾವಾಗಲೂ ಮಹಿಳೆಯರಿಗೆ ವಿಶೇಷ ಅನುಭೂತಿಯನ್ನು ನೀಡುತ್ತವೆ"
ಪುರುಷನೊಬ್ಬನ ಪರಾಕ್ರಮ, ಅವನ ಸುತ್ತಲಿನ ಪರಿಸರದಿಂದ ಅವನ ಸಮತೋಲನದ ಚೌಕಟ್ಟು ಭಯದಿಂದ ತಲ್ಲಣಗೊಳ್ಳುವುದನ್ನು ದಾಸ್ ಸ್ತ್ರೀ ಪರ ನೋತದಿಂದ ಕಾಣುತ್ತಾರೆ.ಮೆಂಟೋ ಒಬ್ಬ ಕಲಾವಿದನಾಗಿ ಅವನಿಗೆ ಹಿಂದೂ-ಮುಸ್ಲಿಂ ವಿಭಜನ, ಭಾರತ-ಪಾಕಿಸ್ತಾನ ವಿಭಜನೆ ಹೇಗೆ ಕಾಣಿಸಿದೆ ಎನ್ನುವುದನ್ನು ದಾಸ್ ತಮ್ಮ ಈ ಚಿತ್ರದಲ್ಲಿ ತೊರಿಸಿದ್ದಾರೆ.ವಿಭಜನೆಗಾಗಿ ಮಿಡಿದ ಅವನ ಮನ, ಅನುಭವಿಸಿದ ನೋವು, ಮತಿವಿಕಲ್ಪ ಹೀಗೆ ನಾನಾ ವಿಧದ ವಿಚಾರಗಳು ಚಿತ್ರದಲ್ಲಿದೆ.
ಆದರೆ ದಾಸ್ ಮನುಷ್ಯನ ಪ್ರತಿಭೆಯನ್ನು ಲಘುವಾಗಿ ಪರಿಗಣಿಸುವುದಿಲ್ಲ. ಓರ್ವ ಸಾಮಾನ್ಯ ರಕ್ತ-ಮಾಂಸಗಳಿಂದ ಕೂಡಿದ ಎಲ್ಲಾ ದೋಷಗಳನ್ನು ಒಳಗೊಂಡ ಮನುಷ್ಯನನ್ನು ಸಹ ಉತ್ತಮ ಬೆಳಕಿನಲ್ಲಿ ತೋರಿಸಲು ಬಯಸುತ್ತಾರೆ.ಒಬ್ಬ ಕಲಾವಿದರಾಗಿ ಹೆಚ್ಚಿನ ಪ್ರಯತ್ನದೊಡನೆ ವಿಶೇಷವಾಗಿ ಚಿತ್ರವನ್ನು ತಯಾರಿಸಿದ್ದಾರೆ. ಲಘು ಕಾದಂಬರಿಗಾರ್ತಿಯಾಗಿ , ನಾನು ಮ್ಯಾಂಟೋನ ಮನಸ್ಸಿನ ದುಗುಡವನ್ನು ಅರ್ಥಮಾಡಿಕೊಳ್ಳಬಲ್ಲೆ. ದಾಸ್ ನ ಸ್ಥಿರ ನೋಟದ ಮೂಲಕ ಇದನ್ನು ಇನ್ನಷ್ಟು ಸ್ಪಷ್ಟವಾಗಿ ಕಾಣಿಸುತೇನೆ..