ಮುಂಬೈ: ಭಾರತದಲ್ಲಿ ದಿನ ದಿನಕ್ಕೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವ "ಮೀಟೂ" ಚಳವಳಿಗೆ ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬೆಂಬಲ ಸೂಚಿಸಿದ್ದಾರೆ.
"ನಾನು ಈ ಹಿಂದೆಯೇ ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡಿದ್ದೆ.ಈಗಲೂ ಮಾತನಾಡುವೆ, ಮುಂದೆಯೂ ಮಾತನಾಡುತ್ತೇನೆ" ಎಂದಿರುವ ಐಶ್ವರ್ಯಾ ರೈ ಲೈಂಗಿಕ ದೌರ್ಜನ್ಯದ ಕುರಿತು ಇದೇ ಸಮಯದಲ್ಲೇ ಹೇಳಬೇಕು, ಇದೇ ಸ್ಥಳದಲ್ಲಿ ಹೇಳಬೇಕೆನ್ನುವ ನಿಯಮವಿಲ್ಲ. ಯಾವಾಗಲಾದರೂ ತಮಗಾದ ಕೆಟ್ಟ ಅನುಭವಗಳನ್ನು ಕುರಿತು ವಿವರಿಸಿದಾಗ ಅಂತಹವರಿಗೆ ಸಹಾಯ ಮಾಡಲು ಸುಲಭ ಮಾರ್ಗ ದೊರೆಯುತ್ತದೆ ಎಂದಿದ್ದಾರೆ.
ಮಹಿಳೆಯರು ಆತ್ಮವಿಶ್ವಾಸ, ಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕಿದೆ.ಆಗ ಇಂತಹಾ ಅನುಭವವನ್ನು ಯಾವ ಮುಜುಗರವಿಲ್ಲದೆ ಹಂಚಿಕೊಳ್ಳಲು ಸಾಧ್ಯವಾಗಲಿದೆ. ಈಗ ಇದೊಂದು ಚಲವಳಿ, ಅಭಿಯಾನವಾಗಿ ರೂಪು ತಳೆದಿರುವುದು ನನಗೆ ಸಂತಸ ತಂದಿದೆ.
2002ರಲ್ಲಿ ಐಶ್ವರ್ಯಾ ರೈ ಸಲ್ಮಾನ್ ಖಾನ್ ತನ್ನೊಡನೆ ಅಸಭ್ಯವಾಗಿ ವರ್ತಿಸಿದ್ದರೆಂದು ಹೇಳಿಕೆ ನೀಡಿದ್ದರು. ಸಲ್ಮಾನ್ ಹಾಗೂ ಐಶ್ವರ್ಯಾ ದೂರವಾದ ಬಳಿಕವೂ ಸಲ್ಮಾ ತಮಗೆ ಪದೇ ಪದೇ ಕರೆ ಮಾಡಿ ಕೆಟ್ಟದಾಗಿ ಮಾತನಾಡುತ್ತಿದ್ದರೆಂದು ಸಹ ಅವರು ಆರೋಪಿಸಿದ್ದರು. ಆದರೆ ಇದೆಲ್ಲ ನಡೆದರೂ ಏನೂ ಆಗಿಲ್ಲವೆನ್ನುವಂತೆ ನಾನು ಎಲ್ಲದರಿಂದ ದೂರವಾಗಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯಳಾಗಿದ್ದೆ ಎಂದು ತಮ್ಮ ಅನುಭವವನ್ನು ಹಿಂದೊಮ್ಮೆ ಮಾದ್ಯಮಗಳೆದುರು ಹಂಚಿಕೊಂಡಿದ್ದರು.
ಈಗ ದೇಶದಾದ್ಯಂತ ಪ್ರಾರಂಬವಾಗಿರುವ "ಮೀಟೂ" ಚಳವಳಿಗೆ ಐಶ್ವರ್ಯಾ ತಮ್ಮ ಬೆಂಬಲ ಸೂಚಿಸುವ ಮೂಲಕ ದುರ್ಬಲ ಮಹಿಳೆಯರ ಪರ ನಿಂತಿದ್ದಾರೆ.