ಸುಮನ್ ರಾವ್ 
ಬಾಲಿವುಡ್

2019 ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ರಾಜಸ್ತಾನದ ಸುಮನ್ ರಾವ್

ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜಸ್ಥಾನದ ಸುಮನ್ ರಾವ್ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2019 ಸೌಂದರ್ಯ ಸ್ಪರ್ಧೆಯನ್ನು ಗೆದ್ದಿದ್ದಾರೆ.

ಮುಂಬೈ:  ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜಸ್ಥಾನದ ಸುಮನ್ ರಾವ್ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2019 ಸೌಂದರ್ಯ ಸ್ಪರ್ಧೆಯಲ್ಲಿ ವಿಜಯೀಯಾದರು.
ಛತ್ತೀಸ್ ಗಢದ ಶಿವಾನಿ ಜಾಧವ್ ಫೆಮಿನಾ ಮಿಸ್ ಗ್ರಾಂಡ್  ಇಂಡಿಯಾ 2019 ಪ್ರಶಸ್ತಿ ಪಡೆದರೆ, ಬಿಹಾರದ ಶ್ರೇಯಾ ಶಂಕರ್ ಮಿಸ್ ಇಂಡಿಯಾ ಯೂನೈಟೆಡ್ ಕಾಂಟಿನೆಂಟ್ಸ್  ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
20 ವರ್ಷದ ಸುಮನ್ ರಾವ್ ಕಾಲೇಜ್ ವಿದ್ಯಾರ್ಥಿನಿಯಾಗಿದ್ದು, ಥೈಲಾಂಡ್ ನಲ್ಲಿ ನಡೆದ 2019 ಮಿಸ್ ವರ್ಲ್ಡ್  ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 
ಜೀವನದಲ್ಲಿ ನಿಗದಿತ ಗುರಿಯ ಕಡೆಗೆ  ಆತ್ಮಸ್ಥೈರ್ಯ ಮೂಡಿದಾಗ ವಿಜಯದ ಹಾದಿಯಲ್ಲಿ ಶ್ರಮ ಪಡುವಂತೆ ಸಂದರ್ಶನದಲ್ಲಿ ಸುಮನ್ ರಾವ್ ತಿಳಿಸಿದರು.
ಬಾಲಿವುಡ್  ನೃತ್ಯಗಾರ್ತಿ ರೆಮೊ ಡಿಸೋಜಾ, ನಟಿ ಉಮಾ ಖುರೇಷಿ , ಚಿತ್ರಾಂಗದಾ ಸಿಂಗ್, ವಸ್ತ್ರ ವಿನ್ಯಾಸಕಿ ಫಲ್ಗುಣಿ ಸೇನ್ ಪಿಕೊಕಾ, ಭಾರತೀಯ ಪುಟ್ಬಲ್ ಆಟಗಾರ್ತಿ ಸುನಿಲ್ ಛೆತ್ರಿ ಮತ್ತಿತರರು ತೀರ್ಪುಗಾರರಾಗಿದ್ದರು. 
ಸಮಾರಂಭದಲ್ಲಿ ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್, ವಿಕಿ ಕೌಶಾಲ್, ಮತ್ತು ಮೌನಿ ರಾಯ್  ನೃತ್ಯ ಪ್ರದರ್ಶಿಸುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಬಾಲಿವುಡ್ ಚಿತ್ರ ನಿರ್ಮಾಪಕ ಕರಣ್ ಜೋಹರ್ ಹಾಗೂ ಮನೀಷ್ ಪೌಲ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!