ಮಗನ ಹುಟ್ಟುಹಬ್ಬಕ್ಕೆ ಹೃದಯಸ್ಪರ್ಶಿ ಪೋಟೋ ಶೇರ್ ಮಾಡಿದ ನಟಿ ಮಲೈಕಾ ಅರೋರಾ!
ಸೌಂದರ್ಯ ಹಾಗೂ ಮೈಮಾಟದಿಂದ ಹೆಸರಾಗಿರುವ ಬಾಲಿವುಡ್ ನಟಿ ಮಲೈಕಾ ಅರೋರಾ, ತನ್ನ 17 ನೇ ವರ್ಷದ ಮಗನ ಹುಟ್ಟುಹಬ್ಬದ ಪ್ರಯುಕ್ತ ಹೃದಯ ಸ್ಪರ್ಶಿ ಪೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ
ಮುಂಬೈ: ಸೌಂದರ್ಯ ಹಾಗೂ ಮೈಮಾಟದಿಂದ ಹೆಸರಾಗಿರುವ ಬಾಲಿವುಡ್ ನಟಿ ಮಲೈಕಾ ಅರೋರಾ, ತನ್ನ 17 ನೇ ವರ್ಷದ ಮಗನ ಹುಟ್ಟುಹಬ್ಬದ ಪ್ರಯುಕ್ತ ಹೃದಯ ಸ್ಪರ್ಶಿ ಪೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
46 ವರ್ಷದ ಮಾಡೆಲ್ ಮಲೈಕಾ ಅರೋರಾ, ತನ್ನ ಇನ್ಸಾಟಾ ಗ್ರಾಂ ಖಾತೆಯಲ್ಲಿ, ತನ್ನ ಮಗ ಅರ್ಹಾನ್ ಪುಟ್ಟ ವಯಸ್ಸಿನಲ್ಲಿ ಹೇಗಿದ್ದ. ಈಗ ಹೇಗಿದ್ದಾನೆ ಎಂಬುದಕ್ಕೆ ತಿಳಿಯಲು ಪೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಅರ್ಹಾನ್ ಗೆ ಹೇಗೆ 17 ವರ್ಷ ಆಯಿತು ಎಂಬುದು ಅದ್ಬುತವಾಗಿದೆ. ನೀನೆ, ನನ್ನ ದೌರ್ಬಲ್ಯ ಹಾಗೂ ಶಕ್ತಿ ಎಂದು ಅರೋರಾ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಅರ್ಹಾನ್ ತಂದೆ ಅರ್ಬಾಜ್ ಖಾನ್ ಕೂಡಾ ತನ್ನ ಮಗನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.