ತಮಿಳುನಾಡಿನ ದಿವಂಗತ ಮಾಜಿ ಸಿಎಂ ಜೆ ಜಯಲಲಿತಾ, ಕಂಗನಾ ರನೌತ್(ಸಂಗ್ರಹ ಚಿತ್ರ) 
ಬಾಲಿವುಡ್

ಜಯಲಲಿತಾ ಜೀವನಚರಿತ್ರೆಯ 'ತಲೈವಿ'ಚಿತ್ರದ ಫಸ್ಟ್ ಲುಕ್ : ಕಂಗನಾ ನೋಟಕ್ಕೆ ಪ್ರೇಕ್ಷಕರು ಏನೆಂದರು? 

ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನ ಜೀವನಚರಿತ್ರೆಯಾಧಾರಿತ ಚಿತ್ರ ತಲೈವಿಯ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಬಾಲಿವುಡ್ ನಟಿ ಕಂಗನಾ ರನೌತ್ ಅವರ ನೋಟಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂಬೈ: ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನ ಜೀವನಚರಿತ್ರೆಯಾಧಾರಿತ ಚಿತ್ರ ತಲೈವಿಯ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಬಾಲಿವುಡ್ ನಟಿ ಕಂಗನಾ ರನೌತ್ ಅವರ ನೋಟಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಪೋಸ್ಟರ್ ನಲ್ಲಿ ಜಯಲಲಿತಾ ಅವರ ಯೌವ್ವನದ ಸಿನಿಮಾ ದಿನದ ನೋಟ ಮತ್ತು ರಾಜಕಾರಣಕ್ಕೆ ಇಳಿದ ನಂತರದ ಸನ್ನಿವೇಶವನ್ನು ತೋರಿಸಲಾಗಿದೆ. ಮೊದಲಿನ ನೋಟಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಎರಡನೆಯ ನೋಟಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಕೆಲವರು ಕಂಗನಾ ನೋಟವನ್ನು ಇಷ್ಟಪಟ್ಟರೆ ಇನ್ನು ಕೆಲವರು ಜಯಲಲಿತಾ ಅವರಿಗೂ ಕಂಗನಾ ರನೌತ್ ಪಾತ್ರಕ್ಕೂ ಹೋಲಿಕೆಯಾಗುವುದೇ ಇಲ್ಲ, ಆನಿಮೇಟೆಡ್ ಬೊಂಬೆ ತರಹ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ. ಎರಡನೆ ಲುಕ್ ನಲ್ಲಿ ಹಸಿರು ಸೀರೆ ಮತ್ತು ಹಸಿರು ಮೇಲಂಗಿ ತೊಟ್ಟು ಕಂಗನಾ ರನೌತ್ ಗೆಲುವಿನ ಸಂಕೇತವನ್ನು ತೋರಿಸುತ್ತಿದ್ದಾರೆ.

 
ವಿನಯ್ ನಿರ್ದೇಶನದ ತಲೈವಿ ಚಿತ್ರವನ್ನು ವಿಷ್ಣು ವರ್ಧನ್ ಇದುರೈ ಮತ್ತು ಶೈಲೇಶ್ ಆರ್ ಸಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಜಯಲಲಿತಾ ಅವರ ರಾಜಕೀಯ ಗುರು ಎಂ ಜಿ ರಾಮಚಂದ್ರನ್ ಅವರ ಪಾತ್ರವನ್ನು ಅರವಿಂದ್ ಸ್ವಾಮಿ ಮಾಡುತ್ತಿದ್ದಾರೆ.
ಒಂದು ಕಾಲದ ನಟಿ ಹಾಗೂ ರಾಜಕಾರಣಿ ಮತ್ತು ಭಾರತದ ಅತ್ಯಂತ ಜನಪ್ರಿಯ ಸಾರ್ವಜನಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಜಯಲಲಿತಾ ಅವರ ಜೀವನ ಕಥೆಯನ್ನು ಜನರ ಮುಂದೆ ತೋರಿಸಲು ನಾನು ಕಾತರನಾಗಿದ್ದೇನೆ. ಇದು ಜನರ ಮುಂದೆ ತೋರಿಸಬೇಕಾದ ಕಥೆಯಾಗಿದೆ. ಕಂಗನಾ ಈ ಪಾತ್ರಕ್ಕೆ ತನ್ನನ್ನು ತೊಡಗಿಸಿಕೊಂಡ ರೀತಿ ನಿಜಕ್ಕೂ ಅದ್ಭುತವಾಗಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ವಿಷ್ಣು.


ತಲೈವಿ ಚಿತ್ರ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಮುಂದಿನ ವರ್ಷ ಜೂನ್ 26ರಂದು ಬಿಡುಗಡೆಯಾಗುತ್ತಿದೆ.ಜಯಲಲಿತಾ ಅವರನ್ನು ಹೋಲುವ ಚಹರೆಯನ್ನು ಕಂಗನಾ ಅವರಿಗೆ ಮೇಕಪ್ ಮಾಡಿದ್ದು ಹಾಲಿವುಡ್ ನ ಮೇಕಪ್ ಕಲಾವಿದ ಜೇಸನ್ ಕೊಲ್ಲಿನ್ಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel