ಬಾಲಿವುಡ್

ಆಸ್ಕರ್ ರೇಸ್ ನಲ್ಲಿ ನೀನಾ ಗುಪ್ತಾ ಅಭಿಯದ 'ದಿ ಲಾಸ್ಟ್ ಕಲರ್ '

Nagaraja AB

ನವದೆಹಲಿ: ವಿಕಾಸ್ ಖನ್ನಾ ಚೊಚ್ಚಲ ನಿರ್ದೇಶನದ ದಿ ಲಾಸ್ಟ್ ಕಲರ್ ' ಚಿತ್ರ  2019ನೇ ಸಾಲಿನ ಆಸ್ಕರ್ ಪ್ರಶಸ್ತಿಗಾಗಿ  ಉತ್ತಮ ಚಿತ್ರಗಳ ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದೆ. 

ಆಸ್ಕರ್ ಪ್ರಶಸ್ತಿಗಾಗಿ ಅರ್ಹತೆಗೊಂಡಿರುವ ಚಿತ್ರಗಳನ್ನು ಅಕಾಡೆಮಿ ಬುಧವಾರ ಬಿಡುಗಡೆ ಮಾಡಿದ್ದು, ಚಿತ್ರತಂಡ  ಹಂಚಿಕೊಂಡಿದೆ. 2018ರಲ್ಲಿ ಪ್ರಕಟಗೊಂಡಿದ್ದ ವಿಕಾಸ್ ರಚಿಸಿದ  ದಿ ಲಾಸ್ಟ್ ಕಲರ್  ಕೃತಿ ಆಧಾರಿತ ಚಿತ್ರದಲ್ಲಿ ನೀನಾ ಗುಪ್ತಾ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಕಳೆದ ವರ್ಷ ನಡೆದ 30ನೇ ಪಾಮ್ ಸ್ಪ್ರೀಂಗ್ಸ್  ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಮುಂಬೈ ಚಲನಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಂಡಿತ್ತು. 

ಹಾಲಿವುಡ್  ನ ಡಲ್ಬಿ ಥಿಯೇಟರ್ ನಲ್ಲಿ ಫೆಬ್ರವರಿ 9 ರಂದು 92ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
 

SCROLL FOR NEXT