ಬಾಲಿವುಡ್

ಬಾಲಿವುಡ್ ನಟಿ ಕಂಗನಾ, ಸಹೋದರಿ ರಂಗೋಲಿಗೆ ಮುಂಬೈ ಪೋಲೀಸರಿಂದ ಸಮನ್ಸ್!

Raghavendra Adiga

ಮುಂಬೈ: "ತನು ವೆಡ್ಸ್ ಮನು" ನಟನ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮುಂಬೈ ಪೊಲೀಸರು ಬಾಲಿವುಡ್ ನಟ ಕಂಗನಾ ರನೌತ್ ಹಾಗೂ ಆಕೆಯ ಸೋದರಿ ರಂಗೋಲಿ ಚಾಂಡೆಲ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಸಂಬಂಧಿಸಿ ಕೇಸ್ ನಲ್ಲಿ ಕಂಗನಾ ಹಾಗೂ ಆಕೆಯ ಸೋದರಿ 2020 ರ ನವೆಂಬರ್ 10 ರಂದು ವಿಚಾರಣೆಗೆ ಬರಬೇಕೆಂದು ಸಮನ್ಸ್ ನಲ್ಲಿ ತಿಳಿಸಲಾಗಿದೆ. ಈ ಇಬ್ಬರೂ ಸಮುದಾಯಗಳ ನಡುವೆ ಒಡಕು ಮೂಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮುಂಬೈನ ಬಾಂದ್ರಾ ಕೋರ್ಟ್ ಆದೇಶದಂತೆ ಕಂಗನಾ ಮತ್ತು ಅವರ ಸಹೋದರಿ ರಂಗೋಲಿ ವಿರುದ್ಧ ಎಫ್‌ಐಆರ್‌ ಸಂಬಂಧ ಈ ಸಮನ್ಸ್ ಜಾರಿಯಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಸಮುದಾಯಗಳ ನಡುವೆ ಒಡಕು ಮೂಡಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪದ ಮೇಲೆ ಕೇಸ್ ದಾಖಲಾಗಿದೆ.

ಟ್ವೀಟ್ ಹಾಗೂ ಸಂದರ್ಶನಗಳ ಮೂಲಕ ಧಾರ್ಮಿಕ ಅಸಮಾನತೆಯನ್ನು ಸೃಷ್ಟಿಸುವ ಯತ್ನದ ಆರೋಪದ ಮೇಲೆ ಬಾಲಿವುಡ್ ನಟಿಕಂಗನಾ ರನೌತ್ ವಿರುದ್ಧ ಮುಂಬೈನ ಬಾಂದ್ರಾ ನ್ಯಾಯಾಲಯ ಕಳೆದ ತಿಂಗಳು ಎಫ್‌ಐಆರ್ (ಮೊದಲ ಮಾಹಿತಿ ವರದಿ) ದಾಖಲಿಗೆ ಆದೇಶಿಸಿತ್ತು.

SCROLL FOR NEXT