ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

'ಭಜರಂಗಿ ಭಾಯಿಜಾನ್' ಖ್ಯಾತಿಯ ಬಾಲಿವುಡ್ ನಟ ಕೊರೋನಾಗೆ ಬಲಿ!

ಬಾಲಿವುಡ್‌ ನ ಪ್ರಸಿದ್ದ ಚಿತ್ರ ಸಲ್ಮಾನ್ ಖಾನ್ ಅಭಿನಯದ "ಭಜರಂಗಿ ಭಾಯಿಜಾನ್" ನಲ್ಲಿ ಅಭಿನಯಿಸಿ ಹೆಸರಾಗಿದ್ದ ನಟ ಹರೀಶ್ ಬಚಾಟಾ (57) ಕೊರೋನಾಗೆ ಬಲಿಯಾಗಿದ್ದಾರೆ.

ಹರೀಶ್ ಬಚಾಟಾ
Raghavendra Adiga
Updated On : 11 Nov 2020, 6:33 pm

ಶಿಮ್ಲಾ: ದೇಶಾದ್ಯಂತ ಕೊರೋನಾ ಹೆಮ್ಮಾರಿ ವ್ಯಾಪಿಸುತ್ತಲೇ ಇದ್ದು ನ್ನೂ ಹೆಚ್ಚಿನ ಸಂಖ್ಯೆಯ ಜನರು ಸೋಂಕಿಗೆ ಒಳಗಾಗುತ್ತಲೇ ಇದ್ದಾರೆ.ಏತನ್ಮಧ್ಯೆ, ಬಾಲಿವುಡ್ ನಿಂದ ಇನ್ನೊಂದು ಕೆಟ್ಟ ಸುದ್ದಿ ಬಂದಿದೆ. ಬಾಲಿವುಡ್‌ ನ ಪ್ರಸಿದ್ದ ಚಿತ್ರ ಸಲ್ಮಾನ್ ಖಾನ್ ಅಭಿನಯದ "ಭಜರಂಗಿ ಭಾಯಿಜಾನ್" ನಲ್ಲಿ ಅಭಿನಯಿಸಿ ಹೆಸರಾಗಿದ್ದ ನಟ ಹರೀಶ್ ಬಚಾಟಾ (57) ಕೊರೋನಾಗೆ ಬಲಿಯಾಗಿದ್ದಾರೆ.

ಹಿಮಾಚಲ ಪ್ರದೇಶ ಮೂಲದ ಹರೀಶ್ ಮಂಗಳವಾರ ಬೆಳಿಗ್ಗೆ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 18 ವರ್ಷಗಳ ಕಾಲ ಬಾಲಿವುಡ್ ನಲ್ಲಿ ಸಕ್ರಿಯವಾಗಿದ್ದ ನಟ ಹರೀಶ್  ಬಾಲಿವುಡ್‌ನ ಅನೇಕ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದರು.

ಚಲನಚಿತ್ರಗಳಲ್ಲದೆ, ಹರೀಶ್ ಹಲವಾರು ಟಿವಿ ಧಾರಾವಾಹಿಗಳಲ್ಲಿ ಸಹ ಅಭಿನಯಿಸಿದ್ದರು. ಸಿಐಡಿ ಅವರು ಕ್ರೈಮ್ ಪೆಟ್ರೋಲ್ ನಂತಹಾ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು.

Advertisement

Advertisement

ಮೃತ ಹರೀಶ್ ಅವರ ಅಂತ್ಯ ಸಂಸ್ಕಾರ ಮಂಗಳವಾರ ಸಂಜೆ ಕರೋನಾ ಶಿಷ್ಟಾಚಾರದ ಅಡಿಯಲ್ಲಿಅವರ ಪೂರ್ವಜರ ಸ್ಥಳವಾದ ಕನಲಾಗ್‌ನಲ್ಲಿ ನಡೆದಿದೆ. ಅವರಿಗೆ 9 ನೇ ತರಗತಿಯಲ್ಲಿ ಓದುತ್ತಿರುವ ಪುತ್ರಿ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement