ಬಾಲಿವುಡ್

ಮುಂಬೈ: ಖ್ಯಾತ ಕಾಮಿಡಿಯನ್ ಭಾರ್ತಿ ಸಿಂಗ್ ನಿವಾಸ ಮೇಲೆ ಎನ್ ಸಿಬಿ ದಾಳಿ, ಶೋಧ ಕಾರ್ಯ

Sumana Upadhyaya

ಮುಂಬೈ: ಹಿಂದಿಯ ಜನಪ್ರಿಯ ಕಾಮಿಡಿಯನ್ ಭಾರ್ತಿ ಸಿಂಗ್ ನಿವಾಸದ ಮೇಲೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ(ಎನ್ ಸಿಬಿ) ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.

ಮುಂಬೈಯಲ್ಲಿರುವ ಕಾಮಿಡಿಯನ್ ಭಾರ್ತಿ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಭಾರ್ತಿ ಸಿಂಗ್ ಮತ್ತು ಆಕೆಯ ಪತಿ ನಿಷೇಧಿತ ಮಾದಕ ವಸ್ತುವನ್ನು ಸೇವಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ದಾಳಿ ನಡೆದಿದ್ದು, ಅವರನ್ನು ಹಾಗೂ ಅವರ ಪತಿ ಹರ್ಷ ಲಿಂಬಾಚಿಯಾ ಅವರನ್ನು ವಿಚಾರಣೆಗೆ ಕರೆದಿದ್ದಾರೆ. 

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಡ್ರಗ್ಸ್ ಬಳಕೆ, ಸೇವನೆ ಮತ್ತು ಮಾರಾಟ ವ್ಯಾಪಕವಾಗಿದೆ ಎಂದು ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಕಲಾವಿದರನ್ನು ಎನ್ ಸಿಬಿ ವಿಚಾರಣೆಗೆ ಕರೆದಿದೆ. 

ಈ ತಿಂಗಳ ಆರಂಭದಲ್ಲಿ ನಟ ಅರ್ಜುನ್ ರಾಂಪಾಲ್ ನಿವಾಸದ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿತ್ತು. ನಂತರ ಅವರನ್ನು ಮತ್ತು ಅವರ ಸ್ನೇಹಿತೆ ಗೇಬ್ರಿಯಲ್ ಡೆಮೆಟ್ರಿಯಾಡ್ಸ್ ಅವರನ್ನು ವಿಚಾರಣೆಗೆ ಕರೆದಿತ್ತು. 

SCROLL FOR NEXT